ಮೊರ್ಬಿ ದುರಂತದಲ್ಲಿ 12 ಮಂದಿ ಸಂಬಂಧಿಕರನ್ನು ಕಳೆದುಕೊಂಡ ಬಿಜೆಪಿ ಸಂಸದ.

48
firstsuddi

ಅಹಮದಾಬಾದ್ : ನಿನ್ನೆ ಸಂಜೆ ಗುಜರಾತ್ ನ ಮೊರ್ಬಿ ಕೇಬಲ್ ಸೇತುವೆ ಕುಸಿದು ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕಯಾಗಿದೆ. ಈ ದುರಂತದಲ್ಲಿ ರಾಜ್ ಕೋಟ್ ನ ಬಿಜೆಪಿ ಸಂಸದ ಮೋಹನ್ ಭಾಯ್ ಕುಂದರಿಯಾ ಅವರ ಕುಟುಂಬದ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಈ ದುರಂತದಲ್ಲಿ ನಮ್ಮ ಸಂಬಂಧಿಕರು ಸಹ ಸಾವನ್ನಪ್ಪಿದ್ದಾರೆ. ನನ್ನ ಸೋದರ ಮಾವನ ನಾಲ್ಕು ಹೆಣ್ಣು ಮಕ್ಕಳು, 3 ಅಳಿಯಂದಿರು ಮತ್ತು 5 ಮಕ್ಕಳನ್ನು ಕಳೆದುಕೊಂಡಿದ್ದೇವೆ. ಯಾರೇ ತಪ್ಪ ಮಾಡಿದರೂ ಕ್ರಮ ಕೈಗೊಳ್ಳಲಾಗುವುದು. ಈ ಅಪಘಾತದ ಸತ್ಯಾಸತ್ಯತೆ ಶೇ.100 ಹೊರಬರಲಿದೆ. ಪ್ರಧಾನಿ ಮೋದಿ ಕೂಡ ಈ ವಿಷಯದ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದಾರೆ ಎಂದು ಮೋಹನ್ ಭಾಯ್ ಕುಂದರಿಯಾ ಮಾಹಿತಿ ನೀಡಿದ್ದಾರೆ.

ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಇನ್ನು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.