ಟ್ವಿಟರ್‌ನಲ್ಲಿ ಬ್ಲೂ ಟಿಕ್ ಬೇಕೆಂದ್ರೆ ಇನ್ಮುಂದೆ ಹಣ ಪಾವತಿಸಬೇಕು..?

61
firstsuddi

ವಾಷಿಂಗ್ಟನ್ : ವಿಶ್ವದ ಸಿರಿವಂತ ಉದ್ಯಮಿ ಎಲೋನ್ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಆಪ್ ನಲ್ಲಿ ಹೊಸ ಬದಲಾವಣೆಗಳನ್ನು ತರಲು ಸಜ್ಜಾಗುತ್ತಿದ್ದಾರೆ. ಇದೀಗ ಟ್ವಿಟ್ಟರ್ ನ ಬ್ಲೂ ಟಿಕ್ ಮಾರ್ಕ್ ಪಡೆಯಬೇಕಾದರೆ ಇನ್ನು ಮುಂದೆ ತಿಂಗಳಿಗೆ ಹಣ ಪಾವತಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಹೊಸ ಟ್ವಿಟರ್ ಬ್ಲೂ ಟಿಕ್ ಸಬ್ ಸ್ಕ್ರಿಪ್ಷನ್ ಗಾಗಿ ಬಳಕೆದಾರರಿಗೆ ಪ್ರತಿ ತಿಂಗಳು 19.99 ಯುಎಸ್ ಡಾಲರ್ ಅಥವಾ ಸಮಾರು 1600 ರೂಪಾಯಿ ಶುಲ್ಕ ವಿಧಿಸಲು ಯೋಜಿಸುತ್ತಿದೆ. ಒಂದು ವೇಳೆ ಪಾವತಿಸದೇ ಹೋದಲ್ಲಿ ಆ ಬಳಕೆದಾರರು ಬ್ಲೂ ಟಿಕ್ ಮಾರ್ಕ್ ಅನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಪ್ರಸ್ತುತ ಯೋಜನೆಯಡಿ ವೆರಿಫೈಡ್ ಯೂಸರ್ಸ್ 90 ದಿನಗಳ ಒಳಗೆ ಸಬ್ ಸ್ಕ್ರಿಪ್ಷನ್ ಪಡೆದರೆ ಬ್ಲೂ ಟಿಕ್ ಉಳಿಸಿಕೊಳ್ಳುತ್ತಾರೆ. ಇಲ್ಲವಾದರೆ ಅವರು ಬ್ಲೂ ಟಿಕ್ ಸಬ್ ಸ್ಕ್ರಿಪ್ಷನ್ ಕಳೆದುಕೊಳ್ಳುತ್ತಾರೆ. ನವೆಂಬರ್ 7ರ ಒಳಗೆ ಈ ಫೀಚರ್ ಅನ್ನು ಜಾರಿಗೊಳಿಸುವಂತೆ ಈ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.