ಕಾಳಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ.

63
firstsuddi

ಕಾರವಾರ : ಕಾಳಿ ನದಿಯಲ್ಲಿ ಈಜಲು ಹೋದವನನ್ನು ಮೊಸಳೆಗಳು ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ನಡೆದಿದೆ.

ಗುಜರಾತ್ ಮೂಲದ ದಾಂಡೇಲಿ ನಿವಾಸಿ ಪೀತಾಂಬರಿ ದಾಸ್ ಎಂಬಾತ ಇಂದು ಬೆಳಗ್ಗೆ ಈಜಲು ಕಾಳಿ ನದಿಗೆ ಇಳಿದಿದ್ದಾನೆ. ಈ ವೇಳೆ  ಮೊಸಳೆಗಳು ಈತನ ಮೇಲೆ ದಾಳಿ ನಡೆಸಿ ಹೊತ್ತೊಯ್ದಿದೆ.

ವ್ಯಕ್ತಿಯನ್ನು ಮೊಸಳೆ ಎಳೆದೊಯ್ಯುವುದನ್ನು ಸ್ಥಳೀಯರು ತಮ್ಮ ಕಣ್ಣಾರೆ ನೋಡಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.