ಕಾರು-ಬಸ್ ಮಧ್ಯೆ ಭೀಕರ ಅಪಘಾತ – 11 ಮಂದಿ ದುರ್ಮರಣ…

57
firstsuddi

ಭೋಪಾಲ್ : ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ  11 ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಬೇತುಲ್ ನ ಜಲ್ಲಾರ್ ಪೊಲೀಸ್ ಠಾಣೆ ಬಳಿ ಇಂದು ನಸುಕಿನ ಜಾವ ನಡೆದಿದೆ. ಒಬ್ಬ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವರದಿಗಳ ಪ್ರಕಾರ ಘಟನೆಯಲ್ಲಿ ಸಾವನ್ನಪ್ಪಿರುವ 11 ಪ್ರಯಾಣಿಕರು ಮಹಾರಾಷ್ಟ್ರದ ಅಮರಾವತಿಯಿಂದ ಹಿಂದಿರುಗುತ್ತಿದ್ದರು. ಕಾರು ಚಾಲಕ ವಾಹನ ಚಲಾಯಿಸುತ್ತಿದ್ದ ವೇಳೆ ನಿದ್ರೆಗೆ ಜಾರಿದ್ದರಿಂದ ಅಪಘಾತ ಉಂಟಾಗಿದೆ ಎನ್ನಲಾಗಿದೆ.

ಭೀಕರ ಘಟನೆ ಬಳಿಕ 7 ಶವಗಳನ್ನು ತಕ್ಷಣವೇ ಹೊರತೆಗೆಯಲಾಗಿದೆ. ಉಳಿದ ದೇಹಗಳನ್ನು ಹೊರತೆಗೆಯಲು ನಜ್ಜುಗುಜ್ಜಾದ ವಾಹನದ ಭಾಗಗಳನ್ನು ಬೇರ್ಪಡಿಸಬೇಕಾಯಿತು ಎಂದು ಬೇತುಲ್ ಹಿರಿಯ ಪೊಲೀಸ್ ಅಧಿಕಾರಿ ಸಿಮಲಾ ಪ್ರಸಾದ್ ತಿಳಿಸಿದ್ದಾರೆ.