ಹಿಂದೂ ನಮ್ಮ ಶಬ್ದ ಅಲ್ಲವೇ ಅಲ್ಲ, ನಾನು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ : ಸತೀಶ್ ಜಾರಕಿಹೊಳಿ ಸ್ಪಷ್ಟನೆ…

98
firstsuddi

ಬೆಳಗಾವಿ : ಹಿಂದೂ ಎಂಬ ಪದ ಮೂಲತಃ ಭಾರತದ್ದಲ್ಲ, ಅದು ಪರ್ಷಿಯಾದಿಂದ ಬಂದ ಪದ. ಅಸಲಿಗೆ ಹಿಂದೂ ಎಂಬ ಪದಕ್ಕೆ ಪರ್ಷಿಯಾ ಭಾಷೆಯಲ್ಲಿ ಅಶ್ಲೀಲವಾದ ಅರ್ಥಗಳಿವೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹೇಳಿದ್ದು, ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸದ್ಯ ಇದೀಗ ಈ ಬಗ್ಗೆ ವಿಡಿಯೋ ಸಂದೇಶದ ಮೂಲಕ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದ ಒಂದು ಶಬ್ದದ ವಿಷಯ ಮೇಲೆ ಇವತ್ತು ಇಡೀ ರಾಷ್ಟ್ರ ರಾಜ್ಯದ ಎಲ್ಲಾ ಕಡೆ ಚರ್ಚೆ, ವಿಮರ್ಶೆ ಆಗುತ್ತಿದೆ. ಟೀಕೆಗಳು ಕೇಳಿಬರುತ್ತಿವೆ. ಹೀಗಾಗಿ ಸ್ಪಷ್ಟೀಕರಣ ಕೊಡುವುದು ನನ್ನ ಕರ್ತವ್ಯ. ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದ್ದು ಅಂತಾ ಉಲ್ಲೇಖ ಮಾಡಿದ್ದು ನಿಜ. ಹಿಂದೂ ಶಬ್ದದ ಬಗ್ಗೆ ಕೆಲವು ನಿಂದನೆ ಮಾಡುವಂತ ಸಾಕಷ್ಟು ಶಬ್ದಗಳು ದಾಖಲೆಗಳಲ್ಲಿ ಸಿಗುತ್ತವೆ. ಅದು ಸತೀಶ್ ಜಾರಕಿಹೊಳಿ ಮಾತಲ್ಲ. ಈ ರೀತಿಯ ಭಾಷಣಗಳು ದೇಶದಲ್ಲಿ ಸಾವಿರಾರು ಆಗಿವೆ. ಆದರೂ ಇವತ್ತು ನಾನು ಹೇಳಿದ್ದನ್ನು ದೊಡ್ಡಮಟ್ಟದಲ್ಲಿ ವಿಶ್ಲೇಷಣೆ ಮಾಡ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಹಿಂದೂ, ಪಾರ್ಸಿ, ಇಸ್ಲಾಂ, ಜೈನ ಹಾಗೂ ಬೌದ್ಧ ಧರ್ಮ ಯಾವುದೇ ಇರಲಿ, ಜಾತಿ – ಧರ್ಮವನ್ನು ಮೀರಿ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ನಾನು ಹೇಳಿದರಲ್ಲಿ ಯಾವುದೂ ತಪ್ಪಿಲ್ಲ. ಹಿಂದೂ ಧರ್ಮದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಭಾಷಣ ಒಮ್ಮೆ ಕೇಳಬೇಕು. ಹಿಂದೂ ಧರ್ಮ ಅಂದ್ರೆ ಅದು, ವೇ ಆಫ್ ಲೈಫ್. ನಮ್ಮ ಬಾಳ್ವೆ ಅಂದಿದ್ದಾರೆ. ಇದನ್ನೇ ಸುಪ್ರೀಂಕೋರ್ಟ್ ಸಹ ತನ್ನ ತೀರ್ಪಿನಲ್ಲಿ ಹೇಳಿದೆ. ನಾನಗೆ ಯಾರನ್ನು ಅಪಮಾನ ಮಾಡುವ ಉದ್ದೇಶ ಇಲ್ಲ. ಯಾವುದೇ ಧರ್ಮ ಜಾತಿ ನಂಬದೇ ಇರುವಂತಹ ವ್ಯಕ್ತಿ ನಾನು. ಜಾತಿ, ಧರ್ಮದಿಂದ ನಾನು ದೂರ ಇರೋ ವ್ಯಕ್ತಿ. ಈ ರೀತಿ ನಮ್ಮ ಮೇಲೆ ದೊಡ್ಡ ಅಪರಾಧ ಮಾಡಿರುವ ಹಾಗೆ ಬಿಂಬಿಸಬೇಡಿ. ನನ್ನ ಭಾಷಣ ಹತ್ತು ಸಲ ಕೇಳಿ. ತಪ್ಪಿದ್ರೆ ಚರ್ಚೆ ಇದೇ ರೀತಿ ಚರ್ಚೆ ಮುಂದುವರೆಸಿ. ಹೀಗೆ ಮುಂದುವರೆದರೆ ಮಾನಹಾನಿ ಮೊಕದ್ದಮೆ, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ನಾನು ಯಾವುದೇ ಧರ್ಮ, ಭಾಷೆ ಅವಮಾನ ಮಾಡುವ ಪ್ರಶ್ನೆಯೆ ಇಲ್ಲ. ಮೂವತ್ತು ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದೇನೆ. ಬಹಳಷ್ಟು ವಿಷಯ ನೋಡ್ತೀನಿ. ವಿಕಿಪೀಡಿಯದಲ್ಲಿ ಇರೋದು ಹೇಳಿದ್ದೇನೆ. ದಯವಿಟ್ಟು ತಾವು ಇದನ್ನ ಇಲ್ಲೆ ನಿಲ್ಲಿಸಬೇಕು. ಎಂದಿದ್ದಾರೆ.

ಮಾಧ್ಯಮಗಳು ಈ ಹೇಳಿಕೆಯನ್ನು ಬಹಳ ದೊಡ್ಡ ಉಕ್ರೇನ್ ರಷ್ಯಾ ಯುದ್ಧ ಮಾದರಿಯಲ್ಲಿ, ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ವಿಶ್ಲೇಷಣೆ ಮಾಡ್ತಿವೆ. ಇದೇ ಸಮಯ ಬೇರೆದಕ್ಕೆ ಕೊಟ್ಟಿದ್ದರೆ ಇನ್ನೇನೋ ಪ್ರಗತಿ ಆಗಬಹುದಿತ್ತು. ಹಿಂದೆ ರಾಜ್ಯದಲ್ಲಿ ನಾವು ಸಾಕಷ್ಟು ನೋಡಿದ್ದೇವೆ. ಡಿಕೆ ರವಿ ಹತ್ಯೆಯಾದಾಗ ಒಂದು ತಿಂಗಳು ದಿನವಿಡೀ ರಾಜ್ಯದ ಮನೆ ಮನೆ ಮಾತಾಯ್ತು. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಯಾವ ರೀತಿ ನೀವು ಕೊಲೆ ಅಂತಾ ಬಿಂಬಿಸಲು ಹೊರಟ್ರಿ. ವಿನಾಯಕ ಬಾಳಿಕಾಯಿ ಹತ್ಯೆ ಪ್ರಕರಣ ಇರಬಹುದು, ಶಿವಮೊಗ್ಗದ ಹರ್ಷ ಹತ್ಯೆ ಪ್ರಕರಣ ಇರಬಹುದು. ಪರೇಶ್ ಮೇಸ್ತಾ ಬಗ್ಗೆ ಇಡೀ ಕರಾವಳಿ ಭಾಗ ಹೊತ್ತಿ ಉರಿದು ಹೋಯ್ತು. ಯಾವ ರೀತಿ ನೀವು ಪ್ರೊಜೆಕ್ಷನ್ ಕೊಟ್ರಿ. ದಯವಿಟ್ಟು ನಿಜವಾದ ಸುದ್ದಿ ತೋರಿಸಲು ತಾವು ಪ್ರಯತ್ನ ಮಾಡಿ. ಹಿಂದೂ ಧರ್ಮದ ವಿಷಯ ಬಂದಾಗ ಇಷ್ಟು ವೈಭವಕರೀಸೋದು ಸರಿಯಲ್ಲ. ಹಿಂದೂಗಳ ಕೊಲೆಯಾದರೆ ಅದಕ್ಕೆ ವಿಶೇಷವಾದ ಸ್ಥಾನಮಾನ. ದಲಿತರು ಯಾರಾದರೂ ತೀರಿಕೊಂಡರೆ ಅದಕ್ಕೆ ಸ್ಥಾನಮಾನ ಇಲ್ಲ ಇದು ನಿಲ್ಲಬೇಕು ಎಂದರು.