ರೋಹಿತ್ ಶರ್ಮಾ ಬಲಗೈಗೆ ಪೆಟ್ಟು – ಟಿ20 ವಿಶ್ವಕಪ್ ಸೆಮಿಫೈನಲ್‍ಗೂ ಮುನ್ನ ಟೀಂ ಇಂಡಿಯಾಗೆ ಆಘಾತ…

100
firstsuddi

ಗುರುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿ ಫೈನಲ್ ಪಂದ್ಯಕ್ಕಾಗಿ ಈಗಾಗಲೇ ಅಡಿಲೇಡ್ ಗೆ ಬಂದಿಳಿದಿರುವ ಟೀಂ ಇಂಡಿಯಾ ಅಭ್ಯಾಸ ಶುರುಮಾಡಿದೆ. ಆದರೆ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಬಲಗೈಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದಾರೆ.

ನೆಟ್ ಸೆಷನ್ ನಲ್ಲಿ ಎಸ್. ರಘು ಅವರಿಂದ ಥ್ರೋಡೌನ್ ತೆಗೆದುಕೊಳ್ಳುತ್ತಿದ್ದಾಗ ಶಾರ್ಟ್ ಬಾಲ್ ಅವರ ಬಲಗೈಗೆ ಬಡಿದಿದೆ. 150 ಪ್ಲಸ್ ವೇಗದಲ್ಲಿ 18 ಯಾರ್ಡ್ ಗಳಿಂದ ಎಸೆಯಲ್ಪಟ್ಟ ಥ್ರೋಡೌನ್ ಅನ್ನು ರೋಹಿತ್ ಶಾರ್ಟ್ ಆರ್ಮ್ ಮಾಡಲು ಯತ್ನಿಸಿದರು. ಈ ವೇಳೆ ಕೈಗೆ ಪೆಟ್ಟಾಗಿದೆ, ನೋವು ಅತಿಯಾದ ಕಾರಣ ಬ್ಯಾಟಿಂಗ್ ಅಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿದರು. ಸದ್ಯ ರೋಹಿತ್ ಅವರ ಕೈಗೆ ಪೆಟ್ಟಾಗಿರುವುದರಿಂದ ಟೀಂ ಇಂಡಿಯಾಗೆ ದೊಡ್ಡ ಆಘಾತ ಉಂಟಾಗಿದೆ.

ಭಾನುವಾರ ಭಾರತ ಹಾಗೂ ಜಿಂಬಾಬ್ವೆ ನಡುವಿನ ಕಾದಾಟದಲ್ಲಿ ಟೀಂ ಇಂಡಿಯಾ 71 ರನ್ ಗಳ ಭರ್ಜರಿ ಜಯದೊಂದಿಗೆ ಸೆಮಿಫೈನಲ್ ಗೆ ಲಗ್ಗೆ ಇಟ್ಟಿತು.