ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಷರತ್ತುಬದ್ಧ ಅನುಮತಿ…

61
firstsuddi

ಹುಬ್ಬಳ್ಳಿ : ಇಲ್ಲಿನ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮಹಾನಗರ ಪಾಲಿಕೆ ಷರತ್ತುಬದ್ಧ ಅನುಮತಿ ನೀಡಿದೆ.

ಷರತ್ತುಗಳೇನು?
10 ಸಾವಿರ ಶುಲ್ಕ ಪಾವತಿಸಬೇಕು, 3 ಬೈ 5 ಅಡಿ ಅಳತೆಯ ಟಿಪ್ಪು ಭಾವ ಚಿತ್ರಕ್ಕೆ ಮಾತ್ರ ಅವಕಾಶ, 20 ಅಡಿ ಉದ್ದ 30 ಅಡಿ ಅಗಲ ಪೆಂಡಾಲ್ ಹಾಕಬೇಕು, ಬೇರೆ ಯಾವುದೇ ಬಾವುಟ, ಧ್ವಜ, ಭಾವಚಿತ್ರ ಪ್ರದರ್ಶಿಸುವಂತಿಲ್ಲ, ಈದ್ಗಾ ಮೈದಾನದ ಆಸ್ತಿಗೆ ಯಾವುದೇ ಧಕ್ಕೆ ತರಬಾರದು, ಮಧ್ಯಾಹ್ನ 12 ಗಂಟೆಗೆ ಟಿಪ್ಪು ಜಯಂತಿ ಆಚರಣೆಗೆ ಅವಕಾಶ, ಜಯಂತಿ ವೇಳೆ ಗಲಭೆ, ಗೊಂದಲಗಳಿಗೆ ಅವಕಾಶ ಮಾಡಬಾರದು.