ಮುಕುಡಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ ಸಿದ್ದರಾಮಯ್ಯ ಬೆಂಬಲಿಗರು…

97

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿ ಮಾತು ಆಡಿದ ಹಿನ್ನೆಲೆ ಕುರುಬ ನಾಯಕ ಮುಕುಡಪ್ಪ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನಗರದ ವಿಜಯನಗರದಲ್ಲಿರುವ ಮುಕುಡಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ ಸಿದ್ದರಾಮಯ್ಯ ಬೆಂಬಲಿಗರು ಮುಕುಡಪ್ಪ ಮನೆಯಲ್ಲಿ ಇರದ ಕಾರಣ ಮನೆಗೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಅದಲ್ಲದೇ ಮುಕುಡಪ್ಪ ಪೋಸ್ಟರ್ ಗೂ ಮಸಿ ಬಳಿದು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯಲ್ಲಿ ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಜಿ.ಕೃಷ್ಣಮೂರ್ತಿ, ಆನಂದ್ ಕುಮಾರ್, ಮು.ಗಣೇಶ, ಕೆ.ಟಿ.ಗಣೇಶ್, ಶ್ರೀನಿವಾಸ್, ಸೋಮು, ಶಶಿ, ಕಾಂತಮಣಿ, ಮಂಜುಳರವರು ಪಾಲ್ಗೊಂಡಿದ್ದರು.

ಏನಿದು ವಿವಾದ?
ನಿನ್ನೆ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಮಾಡಲು ಬಂದಿದ್ದ ಕುರುಬ ಸಮುದಾಯದ ಮುಖಂಡರಾದ ಮುಕುಡಪ್ಪ, ಪುಟ್ಟಸ್ವಾಮಿ ಅವರು ಸುದ್ದಿಗೋಷ್ಠಿಗೂ ಮುನ್ನ ಮಾತನಾಡುತ್ತ ಕುಳಿತಿದ್ದರು. ಆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಟ್ಟ ಶಬ್ದವನ್ನು ಬಳಸಿ ಅವಮಾನ ಮಾಡಿದ್ದಾರೆ.

ಮುಕುಡಪ್ಪ ಹಾಗೂ ಪುಟ್ಟಸ್ವಾಮಿ ಇಬ್ಬರು 20 ಕುರಿಗಳ ಮೇಲೆ ಒಂದು ಟಗರು ಎಗರಿ ಬೀಳುತ್ತೆ ಎಂದು ಮಾತನಾಡುತ್ತಿದ್ದರು. ಆ ವೇಳೆ ಮುಕುಡಪ್ಪ, ಯಾರು ಅಂತಾ ಅಲ್ಲ ಎಲ್ಲರೂ ಹೇಳುತ್ತಾರೆ. ಆಗ ಮುಕುಡಪ್ಪ, ಎಲ್ಲರದ್ದೂ ಅಷ್ಟೇ, ಕೆಲವರದ್ದು ಹೊರಗೆ ಬರುತ್ತೆ, ಕೆಲವರದ್ದು ಹೊರಗೆ ಬರಲ್ಲ ಅಷ್ಟೇ ಎಂದು ಹೇಳುತ್ತಾರೆ.

ಆಗ ಸಿದ್ದರಾಮಯ್ಯ ಅವರನ್ನು ಹೆಸರನ್ನು ಪ್ರಸ್ತಾಪಿಸಿ ಅವಹೇಳನ ಮಾಡುತ್ತಾರೆ. ಸಿದ್ದರಾಮಯ್ಯನ ಬಗ್ಗೆ ಮಾತನಾಡುವಾಗ ಹುಷಾರು.. ಸೂ.. ಮಗಾ ಎಂದು ಹೇಳಿ ಮುಕ್ಕಡಪ್ಪ ನಗುತ್ತಾನೆ. ಅದಕ್ಕೆ ಪುಟ್ಟಸ್ವಾಮಿ ಪ್ರತಿಕ್ರಿಯಿಸಿ, ಹೌದು, ಅವನು ಬುದ್ಧಿವಂತ.. ಮನೆ ಒಳಗೆ ಸೇರಿಕೊಂಡುಬಿಡ್ತಾನೆ ಎಂದು ಹೇಳುತ್ತಾರೆ.