ಜಿ20 ಶೃಂಗಸಭೆ : ರಿಷಿ ಸುನಾಕ್ ಭೇಟಿಯಾದ ಪ್ರಧಾನಿ ಮೋದಿ.

82
firstsuddi

ಜಕಾರ್ತ್ : ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬ್ರಿಟನ್ ಪ್ರಧಾನಿ ಭಾರತ ಮೂಲದ ರಿಷಿ ಸುನಾಕ್ ಅವರನ್ನು ಭೇಟಿಯಾದರು.

ರಿಷಿ ಸುನಾಕ್ ಅವರನ್ನು ಭೇಟಿ ಮಾಡಿರುವ ಬಗ್ಗೆ ಭಾರತದ ಪ್ರಧಾನ ಮಂತ್ರಿಗಳ ಕಚೇರಿ ಟ್ವೀಟ್ ಮಾಡಿದ್ದು, ಸುನಕ್ ಹಾಗೂ ಮೋದಿ ಜೊತೆಗಿನ ಫೋಟೋವನ್ನು ಶೇರ್ ಮಾಡಿದೆ. ರಿಷಿ ಸುನಾಕ್ ಯುಕೆ ಪ್ರಧಾನಿಯಾದ ನಂತರ ಇದು ಪ್ರಧಾನಿ ಮೋದಿ ಅವರೊಂದಿಗೆ ಪ್ರಥಮ ಭೇಟಿಯಾಗಿದೆ.

ನಿನ್ನೆ ಬಾಲಿಗೆ ಆಗಮಿಸಿದ ಪ್ರಧಾನಿ ಮೋದಿ, ಯುಎಸ್ ಅಧ್ಯಕ್ಷ ಜೋ ಬೈಡನ್ ಸೆನೆಗಲ್ ಗಣರಾಜ್ಯದ ಅಧ್ಯಕ್ಷ ಮ್ಯಾಕಿ ಸಾಲ್, ನೆದರ್ ಲ್ಯಾಂಡ್ ನ ಪ್ರಧಾನಿ ಮಾರ್ಕ್ ರುಟ್ಟೆ ಅವರನ್ನು ಭೇಟಿಯಾದರು. ಭಾರತವು ಡಿ.1 2022ರಿಂದ ಒಂದು ವರ್ಷ ಕಾಲ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.