ಅಕೋಲಾ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರದ ಅಕೋಲಾದ ಪತೂರ್ನಿಂದ ಇಂದು ಬೆಳಗ್ಗೆ 6 ಗಂಟೆಗೆ ಪುನರಾರಂಭವಾಯಿತು. ರಾಜ್ಯದಲ್ಲಿ 11ನೇ ದಿನದ ಯಾತ್ರೆ ಸಾಗುತ್ತಿದ್ದು, ವಾಲೇಗಾಂವ್ ಮೂಲಕ ಯಾತ್ರೆ ಬಾಗ್ ಫಾಟಾ ತಲುಪಲಿದೆ. ಇಂದಿನ ಪಾದಯಾತ್ರೆ ಬಾಳಾಪುರ ತಾಲೂಕಿನ ಬಾಗ್ ಫಾಟಾದಲ್ಲಿ ಕೊನೆಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.










