ಶಿವಮೊಗ್ಗ : ರೈಲಿಗೆ ಸಿಲುಕಿ ಕೂಲಿ ಕಾರ್ಮಿಕನ ಕಾಲು ತುಂಡು…

62
firstsuddi

ಶಿವಮೊಗ್ಗ : ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕೂಲಿ ಕಾರ್ಮಿಕನೊಬ್ಬನ ಕಾಲು ತುಂಡಾದ ಘಟನೆ ನಗರದ ಸವಳಂಗ ರಸ್ತೆಯಲ್ಲಿ ನಡೆದಿದೆ.

ರೈಲ್ವೆ ಫ್ಲೈಓವರ್ ಕಾಮಗಾರಿ ಕೆಲಸಕ್ಕೆಂದು ಬಿಹಾರ ಮೂಲದ ಕಾರ್ಮಿಕ ಆದಿಲ್ ಬಂದಿದ್ದನು. ಕುಡಿದ ಮತ್ತಿನಲ್ಲಿದ್ದ ಆದಿಲ್ ರೈಲ್ವೆ ಹಳಿಯ ಮೇಲೆ ಕುಳಿತುಕೊಂಡಿದ್ದನು. ಈ ವೇಳೆ ರೈಲು ಬರುತ್ತಿದ್ದರೂ, ಮದ್ಯದ ನಶೆಯಲ್ಲಿ ತೇಲುತ್ತಿದ್ದ ಯುವಕ ಹಳಿಯ ಮೇಲೆ ಕುಳಿತಿದ್ದ, ಇದರಿಂದ ರೈಲು ಆತನ ಕಾಲಿನ ಮೇಲೆ ಚಲಿಸಿದೆ. ಪರಿಣಾಮ ಆದಿಲ್ ಕಾಲು ತುಂಡಾಗಿದೆ.

ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.