ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಅವರು ಕುಟುಂಬ ಸಮೇತರಾಗಿ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯನ ದರ್ಶನ ಪಡೆದಿದ್ದಾರೆ.
ಶಿವಣ್ಣ ಮತ್ತು ಕುಟುಂಬ ಮಂಚಾಲಮ್ಮ ದೇವಿ ದರ್ಶನದ ಬಳಿಕ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ರಾಯರ ದರ್ಶನದ ನಂತರ ಶಿವಣ್ಣ ದಂಪತಿ, ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರಿಂದ ಆಶೀರ್ವಾದ ಪಡೆದಿದ್ದಾರೆ.
ಇನ್ನೂ ರಾಯರ ದರ್ಶನ ಪಡೆದು ಹೊರ ಬಂದ ಶಿವಣ್ಣನಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ಶಿವರಾಜ್‌ಕುಮಾರ್ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ.










