ಸಿಎಂ ಇಂದೇ ಪಂಚಮಸಾಲಿ ಮೀಸಲಾತಿ ಘೋಷಿಸಬೇಕು : ಯತ್ನಾಳ್

50
firstsuddi

ಬೆಳಗಾವಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಇಂದೇ ಸಿಎಂ ಬೊಮ್ಮಾಯಿ ಅವರು ಘೋಷಿಸಬೇಕು. ಇಲ್ಲವಾದಲ್ಲಿ ಅವರೇ ಬಿಜೆಪಿ ಸರ್ಕಾರದ ಕೊನೆಯ ಸಿಎಂ ಆಗಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.

ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2ಎ ಮೀಸಲಾತಿ ನೀಡುವ ಬಗ್ಗೆ ಸಿಎಂಗೆ ಇಂದು ಕೊನೆಯ ದಿನವಾಗಿದೆ. ಅವರೇ ಹೇಳಿದಂತೆ ಇಂದೇ ಮೀಸಲಾತಿ ಘೋಷಣೆ ಮಾಡಬೇಕು. ಮಧ್ಯಾಹ್ನ ಕ್ಯಾಬಿನೆಟ್ ಮೀಟಿಂಗ್ ಇದ್ದು, ಏನು ಘೋಷಣೆ ಬರಲಿದೆ ನೋಡೋಣ ಎಂದರು.

ಎರಡು ವರ್ಷ ವರದಿ ಬರುತ್ತೆ ಅಂತಾ ಹೇಳಿದ್ದಾರೆ. ಜಯಪ್ರಕಾಶ್ ಹೆಗಡೆಗೆ ಸಾವಿರ ಸಾರಿ ಹೇಳಿದ್ದೀವಿ ಬೇಗ ವರದಿ ತರಸಿ ಅಂತಾ. ಈಗ ಉದ್ದೇಶಪೂರ್ವಕವಾಗಿ ಮಧ್ಯಂತರ ವರದಿ ಅಂತಾ ಕಥೆ ಹೇಳೋದಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾವು ನೀಡಿದ ಆಶ್ವಾಸನೆಯಂತೆ 2ಎ ಮಿಸಲಾತಿ ಪ್ರಕಟಿಸದಿದ್ದರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುವುದರ ಜೊತೆಗೆ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದು ಎಚ್ಚರಿಸಿದ್ದಾರೆ.