ಕೋಳಿ ಜೂಜಾಟ – ಬಿಜೆಪಿ ಮುಖಂಡನ ವಿರುದ್ಧ ಎಫ್ಐಆರ್ ದಾಖಲು…

66
firstsuddi

ಕೊಪ್ಪಳ : ನಿಷೇಧಿತ ಕೋಳಿ ಅಂಕ ಜೂಜಾಟ ಆಡಿಸಿದ್ದಕ್ಕಾಗಿ ಬಿಜೆಪಿ ಮುಖಂಡ ನಾಗರಾಜ ಇದ್ಲಾಪುರ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಕನಕಗಿರಿ ತಾಲೂಕಿನ ಇದ್ಲಾಪುರ ಗ್ರಾಮದಲ್ಲಿ ಕೋಳಿ ಪಂದ್ಯ ನಡೆದಿತ್ತು. ನೆರೆಯ ಆಂಧ್ರ, ತೆಲಂಗಾಣದಿಂದ ಬಹಳಷ್ಟು ಜನರು ಆಗಮಿಸಿ ಜೂಜಾಟ ಆಡಿದ್ದರು. ನೂರಾರು ಜನರನ್ನು ಸೇರಿಸಿ ಲಕ್ಷಾಂತರ ರೂಪಾಯಿ ಜೂಜಾಟ ಆಡಿಸಿದ್ದ ಆರೋಪ ನಾಗರಾಜ ಮೇಲಿದೆ.

ಜೂಜಾಟ ಸುದ್ದಿಯಾಗುತ್ತಿದ್ದಂತೆ ನಾಗರಾಜ ವಿರುದ್ಧ ಜಗದೀಶ್ ದೂರು ನೀಡಿದ್ದರು. ಇದೀಗ ನಾಗರಾಜ ಇದ್ಲಾಪುರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ.