ಕಠ್ಮಂಡು : ನೆರೆಯ ದೇಶ ನೇಪಾಳದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ನೇಪಾಳದ ಬಾಗ್ಲುಂಗ್ ಜಿಲ್ಲೆಯಲ್ಲಿ ಸ್ಥಳೀಯ ಕಾಲಮಾನ 01:23 ಹಾಗೂ 02:07 ರ ವೇಳೆಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.7 ಮತ್ತು 5.3 ತೀವ್ರತೆ ದಾಖಲಾಗಿದೆ.
ಇನ್ನೂ ಉತ್ತರಾಖಂಡ್‍ನ ಉತ್ತರಕಾಶಿಯಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ನಿನ್ನೆ ಮಧ್ಯರಾತ್ರಿ ಸುಮಾರು 2.19ಕ್ಕೆ ಭೂ ಕಂಪನ ಆಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅನುಸಾರ ಉತ್ತರ ಕಾಶಿಯಲ್ಲಿ ರಿಕ್ಟರ್ ಮಾಪಕದ ಅನುಸಾರ 3.1ರ ತೀವ್ರತೆ ದಾಖಲಾಗಿದೆ. ಭೂಕಂಪದಿಂದಾಗಿ ಸದ್ಯ ಎಲ್ಲೂ ಸಾವು-ನೋವುಗಳು ಹಾಗೂ ಆಸ್ತಿ-ಪಾಸ್ತಿ ನಷ್ಟವಾಗಿರುವ ವರದಿಯಾಗಿಲ್ಲ.










