ಚಿಕ್ಕಮಗಳೂರು : ಹುಲಿವೇಷ ಕಲಾವಿದ ರಮೇಶ್ ಬಂಗಾರ್ ಅವರ ನಿಧನಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಸಂತಾಪ ವ್ಯಕ್ತಪಡಿಸಿದೆ.
ರಮೇಶ್ ಬಂಗಾರ್ ಅವರು ಹುಲಿವೇಷ, ದೊಡ್ಡಾಟ, ಸಣ್ಣಾಟ ಮತ್ತು ಮೇಕಪ್ ಕಲಾವಿದರಾಗಿ ಹಾಗೂ ರಂಗಭೂಮಿ ಕಲಾವಿದರಾಗಿ ಜಿಲ್ಲೆಯ ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಲೆಗೆ ಜಿಲ್ಲೆಯಲ್ಲಿ ಒಂದು ನೆಲೆ ಮತ್ತು ಬೆಲೆಯನ್ನೂ ತಂದಿದ್ದರು ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಬಹಳಷ್ಟು ಜನರಿಗೆ ಹುಲಿವೇಷ ನೃತ್ಯ ಮತ್ತು ಏಕಪಾತ್ರಾಭಿನಯದ ತರಬೇತಿ ನೀಡಿದ್ದ, ರಂಗ ಕಲಾವಿದರಿಗೆ ವಿಶಿಷ್ಟ ರೀತಿಯಲ್ಲಿ ಮೇಕಪ್ ಮಾಡುತ್ತಿದ್ದ ರಮೇಶ್ ಅವರ ನಿಧನದಿಂದಾಗಿ ಜಿಲ್ಲೆಯ ಜಾನಪದ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಶೋಕಿಸಿದ್ದಾರೆ.










