ಕರುವಿನ ಮೇಲೆ ಅತ್ಯಾಚಾರವೆಸಗಿದ ಯುವಕ ಅರೆಸ್ಟ್…

72
firstsuddi

ರಾಯಚೂರು : ಆಕಳು ಕರುವಿನ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸುಗೂರು ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಲಿಂಗಸುಗೂರು ಠಾಣೆ ಪೊಲೀಸರು ಇಮ್ತಿಯಾಜ್ (24)ನನ್ನ ಬಂಧಿಸಿದ್ದಾರೆ.

ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಆರೋಪಿ ಇಮ್ತಿಯಾಜ್, ಯಾವಾಗಲೂ ತೋಟದ ಮನೆಯಲ್ಲೇ ಮಲಗುತ್ತಿದ್ದ. ನಿನ್ನೆ ಯಾರೂ ಇಲ್ಲದ ವೇಳೆ ಅಮರೇಶ ಎಂಬ ವ್ಯಕ್ತಿಗೆ ಸೇರಿದ್ದ ಆಕಳು ಕರುವಿನ ಕಾಲು ಕಟ್ಟಿ ಹಾಕಿ ಅತ್ಯಾಚಾರ ಎಸಗಿದ್ದಾನೆ. ಸುಮಾರು 7-8 ಆಕಳು ಸಾಕಾಣಿಕೆ ಮಾಡುತ್ತಿದ್ದ ಅಮರೇಶ ಕೊಟ್ಟಿಗೆಯಲ್ಲಿ ಆಕಳು ಕಟ್ಟಿ ಮನೆಗೆ ಹೋದಾಗ ಘಟನೆ ನಡೆದಿದೆ.

ಇಮ್ತಿಯಾಜ್ ನ ಪೈಶಾಚಿಕ ಕೃತ್ಯ ಕಣ್ಣಾರೆ ಕಂಡಿದ್ದ ಅಮರೇಶ ಬಳಿಕ ಇಮ್ತಿಯಾಜ್ ನ ಪೊಲೀಸ್ ಠಾಣೆಗೆ ಒಪ್ಪಿಸಿ ದೂರು ನೀಡಿದ್ದಾರೆ. ಸೆಕ್ಷನ್ 377 ಅಡಿಯಲ್ಲಿ ಇಮ್ತಿಯಾಜ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.