ಹಾಸನ : ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಪ್ರಕರಣದ ಪ್ರಮುಖ ಆರೋಪಿ ಅನೂಪ್ ಕುಮಾರ್ ನನ್ನು ನೆಲಮಂಗಲ ಬಳಿ ಬಂಧಿಸಿದ್ದೇವೆ. ಇದೀಗ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದರು.
ರಾಮನಗರದ ಕ್ವಾರಿಯೊಂದರಿಂದ ಎರಡು ಡೆಟೊನೆಟರ್ ತಂದಿದ್ದ ಆರೋಪಿ, ಬಾಂಬ್ ತಯಾರಿಕೆ ಬಗ್ಗೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿ ನಂತರ ಮಿಕ್ಸಿಯಲ್ಲಿ ಡೆಟೊನೆಟರ್ ಫಿಕ್ಸ್ ಮಾಡಿದ್ದಾನೆ. ಡಿ.16 ರಂದು ಮಹಿಳೆಗೆ ಬೆಂಗಳೂರಿನಿಂದ ಪಾರ್ಸೆಲ್ ಕಳುಹಿಸಿದ್ದ ಆರೋಪಿ ಅನೂಪ್. ಡಿ.17 ರಿಂದಲೇ ಕೊರಿಯರ್ ಟ್ರ್ಯಾಕಿಂಗ್ ಐಡಿ ಮೂಲಕ ಡೆಲಿವರಿ ಆಗಿದಿಯಾ, ಮಿಕ್ಸಿ ಬ್ಲಾಸ್ಟ್ ಆಗಿರುವ ನ್ಯೂಸ್ ಬಂದಿದಿಯಾ ಎಂಬ ಬಗ್ಗೆಯೂ ಪರಿಶೀಲನೆ ಮಾಡಿದ್ದಾನೆ.
ಡಿಸೆಂಬರ್ 17 ರಂದು ಮಹಿಳೆ ಮನೆ ತಲುಪಿದ್ದ ಕೊರಿಯರ್ ಡಿ.26 ರಂದು ಕುವೆಂಪು ನಗರ ಎರಡನೇ ಹಂತ ಮುಖ್ಯ ರಸ್ತೆಯಲ್ಲಿಯಲ್ಲಿರುವ ಕೊರಿಯರ್ ಅಂಗಡಿಯಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡು ಇದೀಗ ಆರೋಪಿಯನ್ನ ಬಂಧಿಸಿ ತನಿಖೆ ನಡೆಸಿದ್ದಾರೆ. ನನ್ನ ಪ್ರೀತಿ ನಿರಾಕರಿಸಿದ್ದಕ್ಕೆ, ಅವಮಾನ ಮಾಡಿದ್ದಕ್ಕೆ ವಸಂತಾಳನ್ನು ಕೊಲ್ಲಲು ನಿರ್ಧರಿಸಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತನಿಖೆ ವೇಳೆ ಬಯಲಾಗಿದೆ.










