ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ : ಚಂದ್ರಕಲಾ.

51
firstsuddi

ಚಿಕ್ಕಮಗಳೂರು: : ಅಗಾಫೆ ಹೋಪ್ ಚಾರಿಟಬಲ್ ಟ್ರಸ್ಟ್ ಮತ್ತು ಸೇವಾ ಭಾರತ್ ಸಂಸ್ಥೆ ವತಿಯಿಂದ ತಾಲೂಕಿನ ಹಿರೇಗೌಜದಲ್ಲಿ ಇಂದು ಗ್ರಾಮಸ್ಥರಿಗೆ ಆರೋಗ್ಯ ಶಿಕ್ಷಣ ತರಬೇತಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಹಳ್ಳಿಯ ಪ್ರತಿಯೊಬ್ಬರೂ ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು. ಸೇವಾ ಭಾರತ್ ಸಂಸ್ಥೆಯ ಸಂಯೋಜಕ ಮೆಕ್ಷಸ್ ಬೆಂಜಮಿನ್ ಮಾತನಾಡಿ, ಗ್ರಾಮೀಣ ಜನರ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಅಗಾಫೆ ಹೋಪ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಮೋಹನ್‍ಕುಮಾರ್ ನಾಯ್ಕ ಮಾತನಾಡಿ, ಶಿಬಿರದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ 150ಕ್ಕೂ ಹೆಚ್ಚು ಗ್ರಾಮೀಣರ ಆರೋಗ್ಯ ತಪಾಸಣೆ ನಡೆಸಲಾಯಿತು. ರೈತರಿಗೆ ಉಚಿತವಾಗಿ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಗ್ರಾ.ಪಂ ಮಾಜಿ ಅಧ್ಯಕ್ಷ ಸಿದ್ದೇಗೌಡ, ಸದಸ್ಯ ಶಿವಕುಮಾರ್, ರುಬೆನ್, ಸಲೋಮಿ ರುಬೆನ್, ಕುಮಾರ್, ದಿವ್ಯ ಉಪಸ್ಥಿತರಿದ್ದರು.