ವಿಶ್ವದಲ್ಲೇ ಭಾರತವನ್ನು ಶ್ರೇಷ್ಠ ದೇಶವನ್ನಾಗಿಸುವ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಕೈ ಜೋಡಿಸಬೇಕು : ಅಮಿತ್ ಶಾ.

54
firstsuddi

ಹುಬ್ಬಳ್ಳಿ : ವಿಶ್ವದಲ್ಲಿಯೇ ಭಾರತವನ್ನು ಶ್ರೇಷ್ಠ ಭಾರತವನ್ನಾಗಿ ಮಾಡುವುದೇ ನಮ್ಮ ಶಪಥ. ಅದಕ್ಕಾಗಿ ತಾವೆಲ್ಲರೂ ಕೈಜೋಡಿಸುವಂತೆ ಕೇಂದ್ರ ಸಚಿವ ಅಮಿತ್ ಶಾ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕೆಎಲ್ ಇ ಸಂಸ್ಥೆಯ ಬಿವಿಬಿ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವದೆದುರು ಭಾರತವನ್ನ ನಾಯಕ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಇಡೀ ವಿಶ್ವಕ್ಕೆ ಭಾರತದ ಶಕ್ತಿ ತೋರಿಸಬೇಕಿದೆ. ಮಹಾನ್ ಭಾರತದ ಕನಸನ್ನ ಯುವಜನತೆ ನನಸು ಮಾಡಬೇಕು. ಟೆಕ್ನಾಲಜಿಯಲ್ಲಿ ಭಾರತ ನಂ 1 ಆಗಬೇಕು. ಅದನ್ನು ಮಾಡುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ಸ್ವಾತಂತ್ರ ಹೋರಾಟಗಾರರ ಕನಸು ನನಸು ಮಾಡಬೇಕಿದೆ ಎಂದರು.

ಸ್ಟಾರ್ಟ್ ಅಪ್ ಗಳಿಗೆ ಸಾಕಷ್ಟು ಒತ್ತು ನೀಡಲಾಗಿದೆ. ಮೊದಲು 3 ಸಾವಿರ ಅರ್ಜಿಗಳು ಸ್ಟಾರ್ಟ್ ಅಪ್ ಗೆ ಬರುತ್ತಿದ್ದವು. ಆದರೆ ಈಗ 1.5 ಲಕ್ಷ ಅರ್ಜಿ ಬರುತ್ತಿವೆ. ಮುದ್ರಾ ಯೋಜನೆಯಲ್ಲಿ ಸಣ್ಣ ಸಣ್ಣ ಸಾಲ ನೀಡಲಾಗಿದೆ. ಡಿಜಿಟಲ್ ಇಂಡಿಯಾ,ಖೇಲೋ ಇಂಡಿಯಾ, ಕಿಟ್ ಇಂಡಿಯಾ ಜಾರಿಯಲ್ಲಿದೆ. ಯುವಕರಿಗಾಗಿ ಮೋದಿ ಸಾಕಷ್ಟು ಅವಕಾಶ ಸೃಷ್ಟಿಸಿದ್ದಾರೆ ನೀವು ಸಾಹಸ ಮಾಡಬೇಕು. ಸಾಹಸ ಮಾಡುವರು ಯಶಸ್ವಿಯಾಗಿ ಬರುತ್ತಾರೆ ಎಂದು ಅಮಿತ್ ಶಾ ಹೇಳಿದರು.

ಮೊದಲಿನಿಗಿಂತ ಹೆಚ್ಚು ಶಾಲಾ ಕಾಲೇಜ್ ಯೂನಿವರ್ಸಿಟಿ ನಾವು ತೆರದಿದ್ದೇವೆ. ವಿದೇಶಿ ವಿಶ್ವವಿದ್ಯಾಲಯಗಳಿಗೆ ದೇಶದಲ್ಲಿ ಅನುಮತಿ ನೀಡಿದ್ದೇವೆ. ಜೋಶಿ ಅವರ ಒತ್ತಡಕ್ಕೆ ಮಣಿದು ಇದೀಗ ಫಾರೆನ್ಸಿಕ್ ಸೈನ್ಸ್ ವಿಶ್ವವಿದ್ಯಾಲಯ ಧಾರವಾಡಕ್ಕೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಅಪರಾಧಗಳಿಗೆ ಪಾರೆನ್ಸಿಕ್ ಉಪಯೋಗ ಪಡೆಯಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಜಗದೀಶ್ ಶೆಟ್ಟರ್, ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಕೆ ಎಲ್ ಇ ಸಂಸ್ಥೆಯ ಅಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ, ಹಾಗೂ ಕೆಎಲ್ಇ ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಅಶೋಕ್ ಶೆಟ್ಟರ್ ಉಪಸ್ಥಿತರಿದ್ದರು.