ಅಂಡಮಾನ್​ನಲ್ಲಿ 4.9 ತೀವ್ರತೆಯ ಭೂಕಂಪ…

62
firstsuddi

ಪೋರ್ಟ್ ಬ್ಲೇರ್ : ಅಂಡಮಾನ್ ನಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ನಿನ್ನೆ ರಾತ್ರಿ 12.15ಕ್ಕೆ ಕಂಪನದ ಅನುಭವವಾಗಿದೆ. ಅದರ ಕೇಂದ್ರಬಿಂದು ಅಂಡಮಾನ್ ಸಮುದ್ರದಲ್ಲಿದೆ. ಭೂಕಂಪದ ಆಳ 77 ಕಿ.ಮೀ. ಇದೆ ಎಂದು ಹೇಳಲಾಗಿದೆ.

ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಗುಜರಾತ್ ನ ಕಚ್ ಜಿಲ್ಲೆಯಲ್ಲಿ ನಿನ್ನೆ ಬೆಳಗ್ಗೆ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.