ಕೇಂದ್ರ ಬಜೆಟ್ 2023 : ಯಾವುದು ದುಬಾರಿ? ಯಾವುದು ಅಗ್ಗ?.. ಇಲ್ಲಿದೆ ಮಾಹಿತಿ

53
firstsuddi

ನವದೆಹಲಿ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಮಂಡನೆ ಮಾಡಿದ್ದಾರೆ. ಬಹುತೇಕ ಐಷರಾಮಿ ವಸ್ತುಗಳ ದರ ಏರಿಕೆ ಮಾಡುವ ಮೂಲಕ ಕೆಲವರಿಗೆ ಶಾಕ್ ನೀಡಿದ್ದಾರೆ. ಕೆಲವು ದಿನ ಬಳಕೆಯ ವಸ್ತುಗಳ ಬೆಲೆ ಕಡಿಮೆ ಮಾಡುವ ಮೂಲಕ ಹಲವರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಯಾವುದು ದುಬಾರಿ?
ಚಿನ್ನ, ಬೆಳ್ಳಿ, ಪ್ಲಾಟಿನಂ, ಸಿಗರೇಟ್, ಎಲೆಕ್ಟ್ರಿಕ್ ಕಿಚನ್ ಚಿಮಣಿ, ಹೆಡ್ ಫೋನ್, ಇಯರ್ ಫೋನ್, ಛತ್ರಿ, ರಬ್ಬರ್ ಉತ್ಪನ್ನ, ಆಭರಣ, ತಾಮ್ರದ ಸ್ಕ್ಯಾಪ್, ಸ್ಮಾರ್ಟ್ ಮೀಟರ್, ಸೋಲಾರ್ ಸೆಲ್, ಸೋಲಾರ್ ಮೋಡೆಲ್ ಗಳು, ಜವಳಿ, ಅಡಿಗೆ ಮನೆಯ ಚಿಮಿಣಿ, ಎಕ್ಸ್ರೇ ಯಂತ್ರ, ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಏರಿಕೆಯಾಗಲಿದೆ.

ಯಾವುದು ಅಗ್ಗ?
ಕ್ಯಾಮೆರಾ, ಲೆನ್ಸ್, ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್, ಫೋನ್ ಚಾರ್ಜರ್, ಟಿವಿ ಪ್ಯಾನಲ್ ಗಳ ಬಿಡಿಭಾಗಗಳು, ಈಥೈಲ್ ಆಲ್ಕೋಹಾಲ್, ಸಿಗಡಿ ಉತ್ಪನ್ನ, ಇಂಗು, ಕೋಕೋ ಬೀಜಗಳು, ಆಟೋಮೊಬೈಲ್ಸ್ ಗಳ ಬೆಲೆಯಲ್ಲಿ ಇಳಿಕೆ ಕಾಣಲಿದೆ.