ಬೆಂಗಳೂರು : ವಿಡಿಯೋ ಕಾಲ್ ಮಾಡಿ ಹೆಂಡತಿಯನ್ನ ತೋರಿಸದಿದ್ದಕ್ಕೆ ಸಹೋದ್ಯೋಗಿಯೊಬ್ಬ ಸ್ನೇಹಿತನಿಗೆ ಕತ್ತರಿಯಿಂದ ಇರಿದಿರುವ ಘಟನೆ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುರೇಶ್ ಮತ್ತು ರಾಜೇಶ್ ಮಿಶ್ರಾ ಇಬ್ಬರೂ ಹೆಚ್ಎಸ್ಆರ್ ಲೇಔಟ್ ನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದರು. ರಾಜೇಶ್ ಮಿಶ್ರಾ ತನ್ನ ಪತ್ನಿಯ ಜೊತೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ನಿನ್ನ ಪತ್ನಿ ನೋಡ್ತೇನೆ ವಿಡಿಯೋಕಾಲ್ ಮಾಡು ಎಂದು ಸುರೇಶ್ ಪಟ್ಟು ಹಿಡಿದಿದ್ದಾನೆ. ಆಗ ತನ್ನ ಹೆಂಡತಿಯನ್ನು ನಿನಗ್ಯಾಕೆ ತೋರಿಸಬೇಕೆಂದು ರಾಜೇಶ್ ಗಲಾಟೆ ಶುರು ಮಾಡಿದ್ದಾನೆ.
ಈ ವೇಳೆ ಮಾತಿಗೆ ಮಾತು ಬೆಳೆದು ಸುರೇಶ್ ರಾಜೇಶ್ ಹೊಟ್ಟೆಗೆ ಕತ್ತರಿಯಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಜೇಶ್ ಮಿಶ್ರಾನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಆರೋಪಿ ಸುರೇಶ್ ನನ್ನ ಬಂಧಿಸಿದ್ದಾರೆ.










