ಪರೀಕ್ಷಾ ಕೇಂದ್ರದಲ್ಲಿ ಮೂರ್ಛೆ ಹೋದ ವಿದ್ಯಾರ್ಥಿ.. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

50
firstsuddi

ಪಾಟ್ನಾ: ಪರೀಕ್ಷೆ ಎಂದರೆ ಭಯ ಎಂದು ಮೂರ್ಛೆ ಹೋಗುವುದನ್ನು ನೋಡಿದ್ದೀರಾ, ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರೇ ಇರುವುದನ್ನು ನೋಡಿ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಮೂರ್ಛೆ ಹೋಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಷರೀಫ್ ನ ಅಲ್ಲಮ ಇಕ್ಬಾಲ್ ಕಾಲೇಜಿನ ವಿದ್ಯಾರ್ಥಿ ಶಂಕರ್ ಬ್ರಿಲಿಯಂಟ್ ಶಾಲೆಯಲ್ಲಿ ಅರ್ಧವಾರ್ಷಿಕ ಪರೀಕ್ಷೆ ಬರೆಯಲು ಹೋಗಿದ್ದನು. ಈ ವೇಳೆ ಪರೀಕ್ಷಾ ಕೇಂದ್ರದಲ್ಲಿ ಹುಡುಗಿಯರು ಮಾತ್ರ ಇದ್ದರು. ಆ 500 ಹುಡುಗಿಯರ ಮಧ್ಯೆ ತಾನೊಬ್ಬನೇ ಎಂದು ತಿಳಿದ ಆತ ಭಯದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.

ಈ ಬಗ್ಗೆ ವಿದ್ಯಾರ್ಥಿಯ ಚಿಕ್ಕಮ್ಮ ಮಾತನಾಡಿ, ಶಂಕರ್ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದ. ಆ ವೇಳೆ ಕೊಠಡಿಯಲ್ಲಿ 500 ಹುಡುಗಿಯರಲ್ಲಿ ಇವನು ಒಬ್ಬನೇ ಹುಡುಗ ಎಂದು ತಿಳಿದಾಗ ಶಂಕರ್ ಭಯದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಹೇಳಿದರು.

ಶಂಕರ್ ನನ್ನು ನಲಂದಾದ ಬಿಹಾರ ಷರೀಫ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಸ್ಥಿತಿ ಸ್ಥಿರವಾಗಿದೆ.

ಬಿಹಾರದಲ್ಲಿ ಇಂಟರ್ ಪರೀಕ್ಷೆ ಆರಂಭವಾಗಿದೆ. ಇದಕ್ಕಾಗಿ ರಾಜ್ಯದಲ್ಲಿ 1464 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಒಟ್ಟು 13 ಲಕ್ಷದ 18 ಸಾವಿರದ 227 ವಿದ್ಯಾರ್ಥಿಗಳು ಇಂಟರ್ ಪರೀಕ್ಷೆ ಬರೆಯುತ್ತಿದ್ದಾರೆ. ಇವರಿಲ್ಲಿ 6 ಲಕ್ಷ 36 ಸಾವಿರದ 432 ವಿದ್ಯಾರ್ಥಿನಿಯರು ಮತ್ತು 6 ಲಕ್ಷ 81 ಸಾವಿರದ 795 ವಿದ್ಯಾರ್ಥಿಗಳು ಸೇರಿದ್ದಾರೆ.