ಜೆಇಇ ಮೇನ್ ಸೆಷನ್ 1ರ ಫಲಿತಾಂಶ ಪ್ರಕಟ…

44
firstsuddi

ಹೈದರಾಬಾದ್ : ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹತೆ ಒದಗಿಸುವ ಜೆಇಇ ಮುಖ್ಯ ಪರೀಕ್ಷೆಯ ಸೆಷನ್ 1ರ ಫಲಿತಾಂಶ ಪ್ರಕಟವಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‍ಟಿಎ) ಜೆಇಇ ಮುಖ್ಯ ಪರೀಕ್ಷೆಯು ಜನವರಿ 24ರಿಂದ ಫೆಬ್ರವರಿ 1ರವರೆಗೆ ನಡೆದಿತ್ತು. ಪೇಪರ್ 1 ಬಿಇ / ಬಿ.ಟೆಕ್ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಇದೀಗ jeemain.nta.nic.in ಅಧಿಕೃತ ವೆಬ್ ಸೈಟ್ ನಲ್ಲಿ ನೋಡಬಹುದು.

ಎನ್ ಟಿಎ ವರದಿ ಪ್ರಕಾರ, ಪೇಪರ್ 1 ಗಾಗಿ 8.6 ಲಕ್ಷ ಅರ್ಜಿದಾರರಲ್ಲಿ, ಒಟ್ಟು 8.22 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದು 95.79 ಶೇಕಡಾ ಹಾಜರಾತಿಯಾಗಿದೆ ಎಂದು ತಿಳಿಸಿದೆ. ಜೆಇಇ ಮೇನ್ ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಹೀಗೆ 13 ಭಾಷೆಗಳಲ್ಲಿ ನಡೆಸಲಾಗುತ್ತದೆ.

ಇಂದು ಪ್ರಕಟವಾದ ಫಲಿತಾಂಶದಲ್ಲಿ ಟಾಪ್ ಬಂದ 2.5 ಲಕ್ಷ ಅಭ್ಯರ್ಥಿಗಳು ಅಡ್ವಾನ್ಸ್ ಪರೀಕ್ಷೆ ಎದುರಿಸಲು ಅರ್ಹರಾಗುತ್ತಾರೆ. ಸೆಷನ್ 1ರ ಬಳಿಕ ಮುಂದಿನ ಹಂತದ ಪರೀಕ್ಷೆ ನಡೆಯಲಿದ್ದು, ಅದರಲ್ಲೂ ಆಯ್ಕೆಯಾದ ಅಭ್ಯರ್ಥಿಗಳು ಅಂತಿಮವಾಗಿ ತಮ್ಮ ತಾಂತ್ರಿಕ ಶಿಕ್ಷಣ ಪ್ರಾರಂಭ ಮಾಡಬಹುದಾಗಿದೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ ಎರಡು ಪೇಪರ್ ಗಳು ಇರುತ್ತವೆ. ಪೇಪರ್ 1 ಪರೀಕ್ಷೆಯನ್ನು ಎನ್‍ಐಟಿ, ಐಐಐಟಿ, ಮತ್ತು ಸಿಎಫ್‍ಟಿಐ ಹಾಗೂ ರಾಜ್ಯ ಸರ್ಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಬಿಇ, ಬಿಟೆಕ್ ಕೋರ್ಸ್‍ಗೆ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.

ಫಲಿತಾಂಶ ಹೀಗೆ ಪರಿಶೀಲಿಸಿ: ಅಭ್ಯರ್ಥಿಗಳು ಮೇಲ್ಕಂಡ ವೆಬ್ ಸೈಟ್ ಗೆ ಲಾಗಿನ್ ಆಗಬೇಕು. ಇದಾದ ಬಳಿಕ ಹೋಮ್ ಪೇಜ್ ನಲ್ಲಿ ಜೆಇಇ ಮೇನ್ಸ್ ಸೆಷನ್ 1ರ ಫಲಿತಾಂಶ ಲಿಂಕ್ ಕಾಣುತ್ತದೆ. ಈ ಲಿಂಕ್ ಗೆ ಕ್ಲಿಕ್ ಮಾಡಿ ಅರ್ಜಿ ಸಂಖ್ಯೆ ಸೇರಿದಂತೆ ಇನ್ನಿತರ ಅಗತ್ಯ ದಾಖಲೆ ನಮೂದಿಸಿ, ಬಳಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ.