ಯುದ್ಧ ವಿಮಾನದ ಮೇಲಿದ್ದ ಹನುಮಂತನ ಚಿತ್ರ ತೆಗೆದು ಹಾಕಿದ ಹೆಚ್ಎಎಲ್.

50
firstsuddi

ಬೆಂಗಳೂರು : ಏರೋ ಇಂಡಿಯಾ 2023ರಲ್ಲಿ ಪ್ರದರ್ಶನದಲ್ಲಿದ್ದ ಹೆಚ್‌ಎಲ್‌ಎಫ್‌ಟಿ-42 “ಮಾರುತ್” ತರಬೇತುದಾರ ಯುದ್ಧ ವಿಮಾನದ ಮೇಲಿದ್ದ ಹನುಮಾನ್ ಚಿತ್ರವನ್ನು ಹೆಚ್ಎಎಲ್ ತೆಗೆದುಹಾಕಿದೆ.

ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ (HLFT-42) ಅನ್ನು ನಿನ್ನೆ ಹೆಚ್ ಎಎಲ್ ಪ್ರದರ್ಶಿಸಿತ್ತು. ತರಬೇತಿ ಯುದ್ಧ ವಿಮಾನದ ಹಿಂಭಾಗದಲ್ಲಿ ಲಂಬವಾದ ರೆಕ್ಕೆ ಮೇಲೆ ಭಗವಾನ್ ಹನುಮಂತನ ಫೋಟೋವನ್ನು ಪ್ರದರ್ಶಿಸಲಾಗಿತ್ತು. ಒಂದು ಧರ್ಮಕ್ಕೆ ಸೇರಿದ ಭಾವಚಿತ್ರ ಅಂಟಿಸಿದ ಹಿನ್ನೆಲೆ ವಿವಾದ ಸೃಷ್ಟಿಯಾಗಿತ್ತು. ಇದೀಗ ಹೆಚ್ ಎಎಲ್ ಯುದ್ಧ ವಿಮಾನದ ಮೇಲಿದ್ದ ಹನುಮಂತನ ಚಿತ್ರವನ್ನು ತೆರವುಗೊಳಿಸಿದೆ.

ಹೆಚ್‌ಎಲ್‌ಎಫ್‌ಟಿ-42 ಮುಂದಿನ ಪೀಳಿಗೆಯ ಸೂಪರ್ ಸಾನಿಕ್ ತರಬೇತುದಾರ ಯುದ್ಧ ವಿಮಾನವಾಗಿದ್ದು, ಆಧುನಿಕ ಯುದ್ಧ ವಿಮಾನ ತರಬೇತಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಈ ವಿಮಾನವು ಅಸ್ತಿತ್ವದಲ್ಲಿರುವ ತರಬೇತುದಾರ ವಿಮಾನಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.