ಬಾಂಬ್ ಬ್ಲಾಸ್ಟ್ ಪ್ರಕರಣ ; ಕರ್ನಾಟಕ, ಕೇರಳ, ತಮಿಳುನಾಡಿನ 60 ಸ್ಥಳಗಳಲ್ಲಿ ಎನ್ಐಎ ದಾಳಿ…

42
firstsuddi

ಚೆನ್ನೈ: ಕೊಯಮತ್ತೂರು ಕಾರ್ ಬಾಂಬ್, ಕರ್ನಾಟಕದ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಕೇರಳ, ತಮಿಳುನಾಡಿನ 60 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ದಾಳಿ ನಡೆಸಿದೆ.

2022ರ ಅಕ್ಟೋಬರ್ 23ರಂದು ತಮಿಳುನಾಡಿನ ಕೊಯಮತ್ತೂರು, ನವೆಂಬರ್ 19ರಂದು ಕರ್ನಾಟಕದ ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದವು. ಇವೆರಡೂ ಪ್ರಕರಣಗಳ ಹಿಂದೆ ಉಗ್ರರ ಕೈವಾಡ ಶಂಕೆಯ ಮೇಲೆ ಎನ್‍ಐಎ ದಾಳಿ ನಡೆಸಿದೆ.

ತಮಿಳುನಾಡಿನ ಕೊಯಮುತ್ತೂರಿನ ಕೊಟ್ಟಯ್ ಈಶ್ವರನ್ ದೇವಸ್ಥಾನ ಎದುರುಗಡೆ ಸ್ಪೋಟಗೊಂಡ ಕಾರ್ ಬ್ಲಾಸ್ಟ್ ನಲ್ಲಿ ಜಮೀಶ್ ಮುಬೀನ್ ಎಂಬುವನು ಸಾವನ್ನಪ್ಪಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್ ಐಎ ಕಳೆದ ವರ್ಷ ಅಕ್ಟೋಬರ್ 23 ರಂದು ತಮಿಳುನಾಡಿನ 43 ಸ್ಥಳಗಳಲ್ಲಿ ದಾಳಿ ಮಾಡಿತ್ತು.

ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಜೊತೆ ಜಮೀಶ್ ಮುಬೀನ್ ನಂಟು ಹೊಂದಿದ್ದು, ಈತ ಆತ್ಮಾಹುತಿ ಬಾಂಬ್ ಗೆ ಧಾರ್ಮಿಕ ಕೇಂದ್ರಗಳು ಮತ್ತು ಸ್ಮಾರಕಗಳನ್ನು ಟಾರ್ಗೆಟ್ ಮಾಡಿದ್ದನು ಎಂದು ಎನ್ ಐಎ ಹೇಳಿದೆ.

ಇನ್ನೂ ಮಂಗಳೂರಿನಲ್ಲಿ ನಡೆದ ಆಟೋ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಆಟೋ ಚಾಲಕ ಮತ್ತು ಆರೋಪಿ ಮೊಹಮ್ಮದ್ ಶಾರಿಕ್ ಇಬ್ಬರು ಗಾಯಗೊಂಡಿದ್ದರು. ಕರಾವಳಿ ಪ್ರದೇಶ ಸೇರಿ ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ದೊಡ್ಡ ಪ್ರಮಾಣದ ದಾಳಿಯನ್ನು ನಡೆಸುವ ಭಾಗವಾಗಿ ಕುಕ್ಕರ್ ಬಾಂಬ್ ಸ್ಫೋಟ ದಾಳಿಗೆ ಸಂಚು ರೂಪಿಸಲಾಗಿತ್ತು ಎಂದು ಎನ್‍ಐಎ ತನಿಖೆಯಲ್ಲಿ ತಿಳಿಸಿತ್ತು.