ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಪತ್ನಿಯಿಂದಲೇ ರೇಪ್ ಕೇಸ್…

69
firstsuddi

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಕೌಟುಂಬಿಕ ಕಲಹ ತೀವ್ರಗೊಂಡಿದೆ. ಇದೀಗ ಸ್ವತಃ ಗಂಡನ ವಿರುದ್ಧವೇ ನಟನ ಪತ್ನಿ ಆಲಿಯಾ ರೇಪ್ ಕೇಸ್ ದಾಖಲಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಹಲವು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.

2021ರಲ್ಲಿಯೇ ನವಾಜುದ್ದೀನ್ ಗೆ ವಿಚ್ಛೇದನ ನೋಟಿಸ್ ನೀಡಲಾಗಿದೆ. ಆದರೂ ಪೊಲೀಸರು ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಗುರುವಾರ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಅತ್ಯಾಚಾರದ ದೂರು(ಪುರಾವೆಯೊಂದಿಗೆ) ದಾಖಲಿಸಿದ್ದೇನೆ. ಏನೇ ಆಗಲಿ ನನ್ನ ಮುಗ್ಧ ಮಕ್ಕಳನ್ನು ಅವರ ಬಳಿ ಹೋಗಲು ಬಿಡುವುದಿಲ್ಲ ಎಂದು ಆಲಿಯಾ ತಿಳಿಸಿದ್ದಾರೆ.

ಈ ದಂಪತಿ 2009ರಲ್ಲಿ ವೈವಾಹಿಕ ಜೀವನ ಆರಂಭಿಸಿದರು. ಆದರೆ ದಂಪತಿ ಕಳೆದ ಕೆಲವು ವಾರಗಳಿಂದ ವೈಯಕ್ತಿಕ ವಿಷಯಗಳು, ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಾ ಸದ್ಯ ಸುದ್ದಿಯಲ್ಲಿದ್ದಾರೆ.