60 ವರ್ಷಗಳ ಬಳಿಕ ಮೊದಲ ಬಾರಿಗೆ ನಾಗಾಲ್ಯಾಂಡ್​ನ ಮಹಿಳಾ ಶಾಸಕಿಯಾಗಿ ಹೆಕಾನಿ ಜಖಾಲು ಆಯ್ಕೆ…

63
firstsuddi

ಕೊಹಿಮಾ : ನಾಗಾಲ್ಯಾಂಡ್ ರಾಜ್ಯ ಸ್ಥಾನಮಾನ ಪಡೆದ 60 ವರ್ಷಗಳ ನಂತರ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಿತ್ರಪಕ್ಷವಾದ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ(ಎನ್ ಡಿಪಿಪಿ) ಹೆಕಾನಿ ಜಖಾಲು ಅವರು ದಿಮಾಪುರ್ 3 ಕ್ಷೇತ್ರದಿಂದ ಗೆದ್ದಿದ್ದಾರೆ.

ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳೆಯರಲ್ಲಿ 48 ವರ್ಷದ ವಕೀಲೆ ಹೆಕಾನಿ ಜಖಾಲು ಒಬ್ಬರು. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಬಿಜೆಪಿಯ ಮಿತ್ರ ಪಕ್ಷವಾದ ಎನ್‍ಡಿಪಿಪಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.

ಜಖಾಲು 31,874 (45.16%) ಮತಗಳನ್ನು  ಪಡೆದರು. ಅವರ ಪ್ರತಿಸ್ಪರ್ಧಿ ಲೋಕ ಜನಶಕ್ತಿ ಪಕ್ಷದ ಅಝೆಟೊ ಝಿಮೊಮಿ ಅವರು 40.34 ಶೇಕಡಾ ಮತಗಳನ್ನು ಪಡೆದರು. ಸ್ಪರ್ಧೆಯು ಕೊನೆಗೊಳ್ಳುವವರೆಗೂ ಇಬ್ಬರ ನಡುವೆಯೂ ಭರ್ಜರಿ ಫೈಟ್ ಏರ್ಪಟ್ಟಿತ್ತು.