ಲೋಕಾಯುಕ್ತಕ್ಕೆ ಸೂಕ್ತ ದಾಖಲೆ ನೀಡಿ ಹಣ ವಾಪಸ್ ಪಡೆಯುತ್ತೇವೆ : ಮಾಡಾಳ್ ವಿರೂಪಾಕ್ಷಪ್ಪ.

42
firstsuddi

ದಾವಣಗೆರೆ : ನನ್ನ ಮಗ ಪ್ರಶಾಂತ್ ಬಳಿ ಸಿಕ್ಕಿರೋದು ನಮ್ಮ ಕುಟುಂಬಕ್ಕೆ ಸೇರಿದ ಹಣವೇ ಹೊರತು, ಲಂಚದ ಹಣವಲ್ಲ. ಲೋಕಾಯುಕ್ತಕ್ಕೆ ಸೂಕ್ತ ದಾಖಲೆ ನೀಡಿ ಹಣವನ್ನು ವಾಪಸ್ ಪಡೆಯುತ್ತೇವೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.

ನಿರೀಕ್ಷಣಾ ಜಾಮೀನು ಪಡೆದು ಚನ್ನಗಿರಿಯ ನಿವಾಸಕ್ಕೆ ವಾಪಸ್ ಬರುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಅದಕ್ಕಾಗಿ ಕೋರ್ಟ್ ನನಗೆ ಜಾಮೀನು ಕೊಟ್ಟಿದೆ. ನನ್ನನ್ನ ಯಾರೂ ಟ್ರ್ಯಾಪ್ ಮಾಡೋಕೆ ಬಂದಿಲ್ಲ. ಆದ್ರೆ ಯಾರೋ ದುರುದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನನ್ನ ಮೇಲೆ ಆದಾಯ ತೆರಿಗೆ ಇಲಾಖೆ ರೇಡ್ ಮಾಡಿಸಿದ್ದರು. ಇದೀಗ ಲೋಕಾಯುಕ್ತ ದಾಳಿ ಮಾಡಿಸಿದ್ದಾರೆ ಎಂದಿದ್ದಾರೆ.

ನಾನು ಸರಳ, ಸಜ್ಜನ ರಾಜಕಾರಣಿ ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನ್ನ ಕ್ಷೇತ್ರದ ಜನರೇ ಹೇಳ್ತಾರೆ. ನಮ್ಮ ಬಳಿ 125 ಎಕರೆ ಅಡಿಕೆ ತೋಟ ಇದೆ. 2 ಕ್ರಶರ್ ಗಳಿವೆ, ಅಡಿಕೆ ಮಂಡಿ ಇದೆ. ಇನ್ನೂ ಅನೇಕ ವ್ಯವಹಾರಗಳಿವೆ. ನನ್ನ ಮಗ ಪ್ರಶಾಂತ್ ಬಳಿ ಸಿಕ್ಕಿರೋದು ನಮ್ಮ ಕುಟುಂಬಕ್ಕೆ ಸೇರಿದ ಹಣವೇ ಹೊರತು, ಲಂಚದ ಹಣವಲ್ಲ. ಲೋಕಾಯುಕ್ತಕ್ಕೆ ಸೂಕ್ತ ದಾಖಲೆ ನೀಡಿ ಹಣವನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ಯಾರೋ ಇಬ್ಬರು ನಮ್ಮ ಕಚೇರಿಗೆ ಹಣ ತಂದಿಟ್ಟು ಓಡಿ ಹೋದರು. ನಂತರ ಲೋಕಾಯುಕ್ತದವರು ಬಂದು ಹಣದ ಮೇಲೆ ಕೈ ಹಿಡಿಸಿ ಸೀಜ್ ಮಾಡಿಕೊಂಡು ಹೋದ್ರು. ನನ್ನ ಮಗ ಪ್ರಶಾಂತ್ ಸುಮ್ಮನೆ ಕುಳಿತಿದ್ದನ್ನು ನಾನು ಗಮನಿಸಿದ್ದೇನೆ. ಯಾರೋ ಷಡ್ಯಂತ್ರ ನಡೆಸಿ ಲೋಕಾಯುಕ್ತ ದಾಳಿಗೆ ಸಿಲುಕಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ ಎಂದು ಅವರು ಹೇಳಿದ್ದಾರೆ.

ಆಡಳಿತ ಪಕ್ಷದ ಶಾಸಕನ ಮನೆ ಮೇಲೆ ದಾಳಿ ಇತಿಹಾಸದಲ್ಲೇ ಮೊದಲು. ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ವ್ಯಕ್ತಿತ್ವದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಗೊತ್ತಿದೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದರು.