ಜಗಳ ಬಿಡಿಸಲು ಹೋದ ಯುವಕನ ಬರ್ಬರ ಕೊಲೆ…

66
firstsuddi

ಬೆಳಗಾವಿ : ಜಗಳ ಬಿಡಿಸಲು ಹೋದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿರುವ ಮಚ್ಚೆ ಬಳಿಯ ಯಳ್ಳೂರ ರಸ್ತೆಯಲ್ಲಿ ನಡೆದಿದೆ. ತಾಲೂಕಿನ ಮಜಗಾಂವ ಗ್ರಾಮದ ಪ್ರತೀಕ್ ಲೋಹಾರ್ (21) ಹತ್ಯೆಯಾದ ಯುವಕ.

ಈತನ ಸ್ನೇಹಿತನೊಂದಿಗೆ ಕೆಲ ಯುವಕರು ಜಗಳವಾಡುತ್ತಿದ್ದರು. ಈ ವೇಳೆ ಪ್ರತೀಕ್ ಜಗಳ ಬಿಡಿಸಲು ಹೋದಾಗ, ದುಷ್ಕರ್ಮಿಗಳು ಬೈಕ್ ನಲ್ಲಿದ್ದ ಸ್ಕ್ರೂಡ್ರೈವರ್ ತೆಗೆದು ಎದೆಗೆ ಚುಚ್ಚಿ ಕೊಲೆ ಮಾಡಿದ್ದಾರೆ.

ಈ ಹಿಂದೆ ಹಲವು ಬಾರಿ ದುಷ್ಕರ್ಮಿಗಳು ಪ್ರತೀಕ್ ಜೊತೆಗೆ ಜಗಳವಾಡಿಕೊಂಡಿದ್ದರು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.