2 ಮದುವೆಯಾದ ಸಾಫ್ಟ್‌ವೇರ್ ಇಂಜಿನಿಯರ್ – ವಾರದಲ್ಲಿ ಮೂರು ದಿನ ಅವಳ ಜೊತೆ, ಮೂರು ದಿನ ಇವಳ ಜೊತೆ, ಭಾನುವಾರ ಫ್ರೀ…

67
firstsuddi

ಭೋಪಾಲ್: 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ಇಬ್ಬರನ್ನು ಮದುವೆಯಾಗಿದ್ದು, ಅವರಿಬ್ಬರೊಂದಿಗಿರಲು ಸಮಯವನ್ನು ನಿಗದಿ ಮಾಡಿದ್ದಾನೆ.

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ವಾರದಲ್ಲಿ 3 ದಿನ ಮೊದಲ ಪತ್ನಿಯೊಂದಿಗೆ, ಉಳಿದ ಮೂರು ದಿನ ಮತ್ತೋರ್ವ ಪತ್ನಿಯೊಂದಿಗೆ ಇರಲು ಸಮಯವನ್ನು ನಿಗದಿ ಮಾಡಿದ್ದಾನೆ. ಉಳಿದಂತೆ ಇನ್ನೊಂದು ದಿನ ಅಂದರೆ ಭಾನುವಾರ ತನ್ನಿಷ್ಟದಂತೆ ಸಮಯ ಕಳೆಯಲು ನಿರ್ಧರಿಸಿದ್ದು, ಇದಕ್ಕೆ ಆತನ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ.

ಏನಿದು ಪ್ರಕರಣ?: 2018ರಲ್ಲಿ ವ್ಯಕ್ತಿಯು 26 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ. ಆ ವೇಳೆ ಆತ ಗುರುಗ್ರಾಮನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. 2 ವರ್ಷಗಳ ಕಾಲ ದಂಪತಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಅವರಿಗೆ ಓರ್ವ ಮಗನು ಇದ್ದ. ಆದರೆ 2020ರಲ್ಲಿ ಕೊರೊನಾ ಪ್ರಾರಂಭವಾದಾಗಿನಿಂದ ದಂಪತಿ ವರ್ಕ್ ಫ್ರಂ ಹೋಮ್ ನಿಂದಾಗಿ ಗ್ವಾಲಿಯರ್ ಗೆ ಬಂದರು. ಅದಾದ ಕೆಲ ತಿಂಗಳ ನಂತರ ವ್ಯಕ್ತಿಯೊಬ್ಬನೇ ಗುರುಗ್ರಾಮ್ ಗೆ ಹಿಂದಿರುಗಿದ್ದಾನೆ. ಗ್ವಾಲಿಯರ್ ನಿಂದ ಗುರುಗ್ರಾಮಕ್ಕೆ ಪತ್ನಿಯು ಬರುತ್ತಿರುವುದಾಗಿ ಹೇಳಿದ್ದಾಳೆ. ಆ ವೇಳೆ 2021ರಲ್ಲೇ ಆ ಪತಿಗೆ ಅದೇ ಕಂಪನಿಯ ತನ್ನ ಸಹೋದ್ಯೋಗಿಯೊಂದಿಗೆ ಮದುವೆಯಾಗಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೇ 2ನೇ ಪತ್ನಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಮೊದಲ ಪತ್ನಿ ಜೀವನಾಂಶಕ್ಕಾಗಿ ಗ್ವಾಲಿಯರ್ ನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಈ ವೇಳೆ ವಕೀಲರೊಬ್ಬರು ಮೊದಲ ಪತ್ನಿ ವಿರೋಧಿಸಿದರೆ ಶಿಕ್ಷೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಆತ ತನ್ನ ಇಬ್ಬರು ಪತ್ನಿಯರನ್ನು ಸೇರಿಸಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮೂವರು ಸೇರಿ ನ್ಯಾಯಾಲಯಕ್ಕೆ ಹೋಗದಿರಲು ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಈ ಒಪ್ಪಂದದ ಪ್ರಕಾರ ವ್ಯಕ್ತಿಯು ವಾರದ ಮೂರು ದಿನಗಳನ್ನು ತನ್ನ ಹೆಂಡತಿಯರಲ್ಲಿ ಒಬ್ಬಳೊಂದಿಗೆ ಮತ್ತು ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಬೇಕು. ಅವರು ಆಯ್ಕೆ ಮಾಡಿದವರ ಜೊತೆ ಭಾನುವಾರ ಕಳೆಯಬಹುದಾಗಿದೆ. ಒಂದು ವೇಳೆ ಈ ಒಪ್ಪಂದವನ್ನು ತಪ್ಪಿದರೆ ಮೊದಲ ಪತ್ನಿ ನ್ಯಾಯಾಲಯಕ್ಕೆ ಹೋಗಬಹುದು ಎಂದು ನಿರ್ಧಾರ ಮಾಡಿಕೊಂಡಿದ್ದಾರೆ.