ಸುದೀಪ್ ಅವರೇ ತಾವು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ- ಪ್ರಕಾಶ್ ರೈ.

59
firstsuddi

ನಟ ಕಿಚ್ಚ ಸುದೀಪ್ ಅವರು ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆಂದು ಸ್ಪಷ್ಟಪಡಿಸಿದ್ದರು.  ನಟ ಪ್ರಕಾಶ್ ರೈ,  ಸುದೀಪ್ ಬಿಜೆಪಿ ಬೆಂಬಲದ ಬಗ್ಗೆ ಅಸಮಾಧಾನ ಪ್ಯಕ್ತಪಡಿಸಿದ್ದರು. ಹಾಗಾಗಿ ಸುದೀಪ್ ಮೌನವಹಿಸಿದ್ದರೂ, ಪ್ರಕಾಶ್ ರೈ ಸುಮ್ಮನಾಗದೆ, ಹಲವಾರು ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

ನಟ ಸುದೀಪ್ ಬಿಜೆಪಿ ಪರವಾಗಿ ನಿಂತಿದ್ದಾರೆ. ಹೀಗಾಗಿ ನಟ ಪ್ರಕಾಶ್ ರೈ ಅವರು “ಕಿಚ್ಚನ ಹೇಳಿಕೆಯಿಂದ ನನಗೆ ಆಘಾತ ಮತ್ತು ನೋವಾಗಿದೆ”. ಎಂದು ಹೇಳಿದ್ದರು.

 ಟ್ವೀಟ್ ಮಾಡಿರುವ ಪ್ರಕಾಶ್ ರೈ, ‘ನೋಡ್ರಪ್ಪ, ನಿಮ್ ಮಾಮನೊ.. ನಿಮ್ ಅತ್ತೇನೊ.. ನಿಮ್ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ರೆ, ನೀವು ದುಡಿದಿದ್ರಲ್ಲಿ 10%.. 20%.. ಇಲ್ಲ 30% ಕೊಡಿ. ಅದು ನಿಮ್ಮಿಷ್ಟ. ಆದರೆ, ಪ್ರಜೆಗಳ 30% ಕೊಳ್ಳೆ ಹೊಡೆಯೋಕೆ ಬಿಡ್ಬೇಡಿ.. ಅಷ್ಟೇ.. ಅಷ್ಟೇ.. ಎಂದು ಬರೆದುಕೊಂಡಿದ್ದಾರೆ.

 ಪ್ರಕಾಶ್ ರೈ, ‘ಸುದೀಪ್ ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು, ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ, ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ. ಇನ್ನು ಮುಂದೆ ನಿಮ್ಮನ್ನೂ ನಿಮ್ಮ ಪಕ್ಷವನ್ನೂ ಪ್ರಶ್ನಿಸುವ ಜನ ದನಿಗೆ ತಯಾರಾಗಿ’ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.