ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಸುಧಾಕರ್.

65
firstsuddi

ಚಿಕ್ಕಬಳ್ಳಾಪುರ: ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್ ಇಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಸಚಿವ ಸುಧಾಕರ್ ಅವರು ಇಂದು ಚುನಾವಣಾ ಅಧಿಕಾರಿಗಳ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ತಹಸೀಲ್ದಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಸುಧಾಕರ್ ಗೆ ಪತ್ನಿ ಪ್ರೀತಿ, ತಂದೆ ಕೇಶವರೆಡ್ಡಿ, ಸಹೋದರಿ ಅಶ್ವಿನಿ, ಹಾಗೂ ಮಾವ ಆನಂದ್ ಸಾಥ್ ನೀಡಿದ್ದಾರೆ.

ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಸುಧಾಕರ್, ಗುರುವಾರ ಗುರುವನ್ನು ನಂಬುವ ನಾನು ತಿರುಪತಿ ತಿಮ್ಮಪ್ಪನ ಪರಮ ಭಕ್ತ. ಹಾಗಾಗಿ ಇಂದು ದೇವರ ದರ್ಶನ ಪಡೆದು ಆಗಮಿಸಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷ ಬಿ ಫಾರಂ ನೀಡಿದ್ದು, ಅದನ್ನು ಪಡೆಯಲು ಸಾಧ್ಯವಾಗಲಿಲ್ಲ. ಹಾಗೆ ಬಂದು ಇಂದು ಸಾಂಕೇತಿಕವಾಗಿ ನಾಮಿನೇಷನ್ ಮಾಡಿದ್ದೇನೆ ಎಂದರು.