ಬೆಂಗಳೂರು : ಲಿಫ್ಟ್‌ಗೆ ಸಿಲುಕಿ ಯುವಕ ಸಾವು…

58
firstsuddi

ಬೆಂಗಳೂರು: ಲಿಫ್ಟ್‌ಗೆ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ನಗರದ ಜೆ.ಸಿ.ರಸ್ತೆ ಭರತ್ ಸರ್ಕಲ್ ಬಳಿಯ ಕಮರ್ಷಿಯಲ್​ ಬಿಲ್ಡಿಂಗ್​ನ ಲಿಫ್ಟ್​​ನಲ್ಲಿ ಸಿಲುಕಿ ಉತ್ತರಪ್ರದೇಶ ಮೂಲದ ವಿಕಾಸ್(26) ಎಂಬ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

ಆಟೋಮೊಬೈಲ್‌‌ನಲ್ಲಿ ಕೆಲಸ ಮಾಡುತ್ತಿದ್ದ ವಿಕಾಸ್ ಲಿಫ್ಟ್‌ಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.