ದಕ್ಷಿಣ ಭಾರತದ ಹೆಸರಾಂತ ನಟಿ, ನಿರ್ಮಾಪಕಿ ಜ್ಯೋತಿಕಾ ಬರೋಬ್ಬರಿ 25 ವರ್ಷಗಳ ನಂತರ ಬಾಲಿವುಡ್ ಗೆ ಮರಳಿದ್ದಾರೆ.
ಖ್ಯಾತ ನಟ ಅಜಯ್ ದೇವಗನ್ ಜೊತೆ ಜ್ಯೋತಿಕಾ ಅಭಿನಯಿಸಲಿದ್ದಾರೆ. ಇದೊಂದು ಹಾರರ್ ಸಿನಿಮಾ ಆಗಿರಲಿದ್ದು, ಆರ್. ಮಾಧವನ್ ಕೂಡ ನಟಿಸಲಿದ್ದಾರೆ. ಇದು ಚಿತ್ರತಂಡದಿಂದಲೇ ಅಧಿಕೃತ ಮಾಹಿತಿಯಾಗಿದ್ದು, ಚಿತ್ರಕ್ಕೆ ಇನ್ನೂ ಟೈಟಲ್ ಬಹಿರಂಗ ಆಗಿಲ್ಲ.
ಜ್ಯೋತಿಕಾ ಮತ್ತು ಪತಿ ಕಂ ನಟ ಸೂರ್ಯ ತಮಿಳಿನಲ್ಲಿ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜ್ಯೋತಿಕಾ ಬಹುತೇಕ ನಿರ್ಮಾಣದಲ್ಲೇ ಬ್ಯುಸಿಯಾಗಿದ್ದರು. ಅಭಿಮಾನಿಗಳ ಒತ್ತಾಸೆಯಂತೆ ಬಾಲಿವುಡ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ವಿಕಾಸ್ ಬಹ್ಲ್ ಅವರು ಈ ಹಾರರ್ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಜೂನ್ ತಿಂಗಳಲ್ಲಿ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ.










