ಬಾಲಕನನ್ನು ಬಲಿ ಪಡೆದ ಮೊಸಳೆಯನ್ನೇ ಥಳಿಸಿ ಹತ್ಯೆ ಮಾಡಿದ ಜನ…

76
firstsuddi

ಪಾಟ್ನಾ: 14 ವರ್ಷದ ಬಾಲಕನನ್ನು ಬಲಿ ಪಡೆದ ಮೊಸಳೆಯನ್ನೇ ಜನ ದೊಣ್ಣೆ ಮತ್ತು ರಾಡ್‌ಗಳಿಂದ ಥಳಿಸಿ ಹತ್ಯೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.

ಬಾಲಕನನ್ನು ಅಂಕಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾದ 5ನೇ ತರಗತಿ ವಿದ್ಯಾರ್ಥಿ.

14 ವರ್ಷದ ಬಾಲಕ ಹೊಸ ಸೈಕಲ್ ಖರೀದಿಸಿದ್ದನು. ಇದಕ್ಕೆ ಪೂಜೆ ಮಾಡಿಸುವ ಸಲುವಾಗಿ ತೊಳೆಯಲೆಂದು ಗಂಗಾ ನದಿಗೆ ಇಳಿದಿದ್ದಾನೆ. ಕೆಲವೇ ಕ್ಷಣಗಳಲ್ಲಿ ನೀರಿನಲ್ಲಿದ್ದ ಮೊಸಳೆಯೊಂದು ಪುಟ್ಟ ಬಾಲಕನನ್ನು ಬಲಿ ಪಡೆದುಕೊಂಡಿದೆ.

ಕುಟುಂಬಸ್ಥರು ಅಂಕಿತ್​ನನ್ನು ರಕ್ಷಿಸಲು ಯತ್ನಿಸಿದರಾದರೂ ಮೊಸಳೆ ದಾಳಿಯಿಂದ ಸಾವನ್ನಪ್ಪಿದ್ದಾನೆ. ಘಟನೆ ನಡೆದು ಒಂದು ಗಂಟೆಯ ನಂತರ ಗಂಗಾ ನದಿಯಿಂದ ಬಾಲಕನ ಅವಶೇಷಗಳನ್ನು ಹೊರತೆಗೆಯಲಾಗಿದೆ. ಆದರೆ ಆಕ್ರೋಶಗೊಂಡ ಸ್ಥಳೀಯರು ಮೀನು ಹಿಡಿಯುವ ಬಲೆಯಿಂದ ಮೊಸಳೆಯನ್ನು ಹಿಡಿದು ದಡಕ್ಕೆ ತಂದು ದೊಣ್ಣೆ ಮತ್ತು ರಾಡ್‌ಗಳಿಂದ ಬರ್ಬರವಾಗಿ ಹೊಡೆದು ಸಾಯಿಸಿಬಿಟ್ಟಿದ್ದಾರೆ. ಇದರ ಸಂಪೂರ್ಣ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.