ಹೊಲದಲ್ಲಿ ಮಲಗಿದ್ದವರ ಮೇಲೆ ಹರಿದ ಜೆಸಿಬಿ- ಮೂವರು ಸ್ಥಳದಲ್ಲೇ ಸಾವು…

55
firstsuddi

ರಾಯಚೂರು: ಹೊಲದಲ್ಲಿ ಮಲಗಿದ್ದವರ ಮೇಲೆ ಜೆಸಿಬಿ ಹರಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿಯಲ್ಲಿ ನಡೆದಿದೆ.

ಛತ್ತೀಸ್‌ಗಢ ಮೂಲದ ಮೂವರು ಕಾರ್ಮಿಕರಾದ ಕೃಷ್ಣಾ(25), ಶಿವರಾಮ್(30), ಬಲರಾಮ(28) ಮೃತಪಟ್ಟ ದುರ್ದೈವಿಗಳು.

ರಾತ್ರಿ ವೇಳೆ ಜಮೀನಿನಲ್ಲಿ ಬೋರ್‌ವೆಲ್ ಕೊರೆದು ಸುಸ್ತಾಗಿದ್ದ ಮೂವರು ಕಾರ್ಮಿಕರು ಹೊಲದ ಬಳಿಯೇ ಇದ್ದ ಕಾಲುದಾರಿಯಲ್ಲಿ ಮಲಗಿದ್ದರು. ಬೋರ್‌ವೆಲ್ ಕೊರೆಸುತ್ತಿದ್ದರಿಂದ ರಸ್ತೆ ಆಗಿರಬಹುದೆಂದು ಕಾಲುದಾರಿಯಲ್ಲಿ ಬಂದ ಜೆಸಿಬಿ ಮಲಗಿದ್ದವರ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಘಟನೆಯ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.