ವಸ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಟಿ.ಇ. ಯೋಗೀಶ್, ಉಪಾಧ್ಯಕ್ಷರಾಗಿ ಆಶಾ ನವೀನ್ ಆಯ್ಕೆ…

88
firstsuddi

ಚಿಕ್ಕಮಗಳೂರು: ತಾಲೂಕಿನ ವಸ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಟಿ.ಇ. ಯೋಗೀಶ್, ಉಪಾಧ್ಯಕ್ಷರಾಗಿ ಆಶಾ ನವೀನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾಧಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಸಿಡಿಪಿಓ ಚರಣ್‍ರಾಜ್ ಅವರು ಯೋಗೀಶ್ ಮತ್ತು ಆಶಾ ನವೀನ್ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಚುನಾವಣೆಯ ನಂತರ ನಡೆದ ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಹಾಗೂ ಅಭಿಮಾನಿಗಳು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಟಿ.ಇ. ಯೋಗೀಶ್, ಉಪಾಧ್ಯಕ್ಷೆ ಆಶಾ ನವೀನ್ ಎಲ್ಲರ ಸಹಕಾರದೊಂದಿಗೆ ಪಕ್ಷಾತೀತವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ವಸ್ತಾರೆ ಗ್ರಾಮ ಪಂಚಾಯಿತಿಯನ್ನು ರಾಜ್ಯದಲ್ಲೆ ಮೊದಲ ಸ್ಥಾನಕ್ಕೆ ತರಲು ಶ್ರಮಿಸುವುದಾಗಿ ತಿಳಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷೆ ಸಿ.ಪಿ. ಸುಧಾ, ಮಾಜಿ ಉಪಾಧ್ಯಕ್ಷ ಮಧುಸೂದನ್, ಸದಸ್ಯರಾದ ವೇದಾ, ಟಿ.ಟಿ. ದೀಪಕ್, ಶಶಿಕಲಾ, ಪಿಡಿಓ ಶಾಂತಿ, ಕಾರ್ಯದರ್ಶಿ ಯೋಗೀಶ್, ಡಿ.ಎಂ. ಮಂಜುನಾಥ ಸ್ವಾಮಿ ಹಾಜರಿದ್ದರು.