ಬಸ್ ಹತ್ತಲು ನೂಕುನುಗ್ಗಲು ಮಾಡಿ ಬಸ್ಸಿನ ಬಾಗಿಲನ್ನು ಮುರಿದ ನಾರಿಮಣಿಗಳು…

48
firstsuddi

ಚಾಮರಾಜನಗರ: ಶಕ್ತಿ ಯೋಜನೆಯ ಪರಿಣಾಮ ಬಸ್ ಹತ್ತಲು ನೂಕುನುಗ್ಗಲು ಮಾಡಿ ನಾರಿಮಣಿಗಳು ಮತ್ತೊಂದು ಬಸ್ಸಿನ ಬಾಗಿಲನ್ನು ಮುರಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಯಳಂದೂರು ನಿಲ್ದಾಣದಲ್ಲಿ ಬಸ್ ಹತ್ತಲು ಮಹಿಳೆಯರು ನೂಕು ನುಗ್ಗಲು ಮಾಡಿದ್ದು, ಈ ಹಿನ್ನೆಲೆ ಬಸ್‌ನ ಬಾಗಿಲು ಮುರಿದು ಬಿದ್ದಿದೆ. ನಿನ್ನೆ ಈ ಘಟನೆ ನಡೆದಿದ್ದು, ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಬಸ್ ಯಳಂದೂರಿನಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳುತ್ತಿದ್ದು, ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ಸಾರಿಗೆ ಬಸ್ ಹತ್ತಲು ಮಹಿಳೆಯರು ಮುಗಿಬಿದ್ದಿದ್ದಾರೆ.

ಕೆಲ ದಿನಗಳ ಹಿಂದೆ ಇದೇ ರೀತಿ ಕೊಳ್ಳೆಗಾಲದಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ಸಾರಿಗೆ ಬಸ್ ಬಾಗಿಲು ಮಹಿಳೆಯರ ತಳ್ಳಾಟ ನೂಕಾಟದಲ್ಲಿ ಮುರಿದು ಹೋಗಿತ್ತು.