ಲಿಫ್ಟ್ ಕುಸಿದು ಮಹಿಳೆ ಸಾವು…

55
firstsuddi

ಉತ್ತರಪ್ರದೇಶ: ವಸತಿ ಸಮುಚ್ಛಯವೊಂದರ ಲಿಫ್ಟ್​ನ ಕೇಬಲ್ ತುಂಡಾಗಿ ಒಳಗೆ ಸಿಲುಕಿದ್ದ ಮಹಿಳೆ ಹೃದಯಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

ಕಟ್ಟಡದ ಎತ್ತರದ ಮಹಡಿಯಲ್ಲಿ ಲಿಫ್ಟ್ ಇತ್ತು. ಮಹಿಳೆ ಕೆಳಗಿಳಿಯುವಾಗ ಲಿಫ್ಟ್ ಕುಸಿತಗೊಂಡಿದೆ. ಲಿಫ್ಟ್ ನೆಲಕ್ಕೆ ಅಪ್ಪಳಿಸಲಿಲ್ಲ ಬದಲಾಗಿ ಕಟ್ಟಡಗಳ ನಡುವೆ ಸಿಕ್ಕಿಬಿದ್ದಿತ್ತು, ಲಿಫ್ಟ್​ನಲ್ಲಿ ಮಹಿಳೆ ಒಬ್ಬಂಟಿಯಾಗಿದ್ದರು, ಆ ಸಮಯದಲ್ಲಿ ಲಿಫ್ಟ್​ನ ತಂತಿ ತುಂಡಾಗಿದ್ದು, ಮಹಿಳೆ ಪ್ರಜ್ಞೆ ತಪ್ಪಿದ್ದರು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ.

ಈ ಘಟನೆ ನಿನ್ನೆ ಸಂಜೆ 4.30ರ ಸುಮಾರಿಗೆ ನಡೆದಿದ್ದು, ಘಟನೆಯ ನಂತರ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಲಿಫ್ಟ್​ನಲ್ಲಿ ಸಿಲುಕಿರುವ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅದು ಅಂತಿಮವಾಗಿ ಅವರ ಸಾವಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯನ್ನು ಖಂಡಿಸಿ ಬಹುಮಹಡಿ ವಸತಿ ಸಮುಚ್ಚಯದ ನಿವಾಸಿಗಳು ಪ್ರತಿಭಟನೆ ನಡೆಸಿದರು ಮತ್ತು ಅಲ್ಲಿ ವಾಸಿಸುವ ಕುಟುಂಬಗಳ ಸುರಕ್ಷತೆಗೆ ಆಡಳಿತವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.