ಶಾರುಖ್ ಖಾನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡ ರಶ್ಮಿಕಾ ಮಂದಣ್ಣ.

115
firstsuddi

ಬಾಲಿವುಡ್ ನಟ ಶಾರುಖ್ ಖಾನ್ ಅವರ ಜೊತೆ ನಟಿಸಬೇಕು ಎನ್ನುವುದು ಬಹುತೇಕ ಎಲ್ಲ ನಟಿಯರ ಆಸೆ ಆಗಿರುತ್ತದೆ. ಈಗ ಶಾರುಖ್ ಖಾನ್ ಜೊತೆ ತೆರೆಹಂಚಿಕೊಳ್ಳುವಂತಹ ದೊಡ್ಡ ಅವಕಾಶ ರಶ್ಮಿಕಾಗೆ ಸಿಕ್ಕಿದೆ.

ಅಂದಹಾಗೆ ಶಾರುಖ್ ಖಾನ್ ಜೊತೆ ರಶ್ಮಿಕಾ ನಟಿಸುತ್ತಿರುವುದು ಸಿನಿಮಾದಲ್ಲಿ ಅಲ್ಲ. ಜಾಹೀರಾತುವೊಂದರಲ್ಲಿ ಇಬ್ಬರೂ ಕಾಣಿಸಿಕೊಳ್ಳುತ್ತಿದ್ದಾರೆ. ಆ ಜಾಹೀರಾತು ಏನು ಎನ್ನುವ ಕುರಿತು ಮಾಹಿತಿ ಹೊರ ಬಂದಿಲ್ಲ. ಜಾಹೀರಾತೊ ಮತ್ತೊಂದೊ? ಒಟ್ಟಿನಲ್ಲಿ ಶಾರುಖ್ ಜೊತೆ ನಟಿಸುವಂತ ಅವಕಾಶ ರಶ್ಮಿಕಾಗೆ ಇಷ್ಟು ಬೇಗ ಸಿಕ್ಕಿರುವುದು ರಶ್ಮಿಕಾ ಅಭಿಮಾನಿಗಳಿಗೆ ಖುಷಿ ನೀಡಿದೆ.

ಯಶ್ ರಾಜ್ ಸ್ಟುಡಿಯೋದಲ್ಲಿ ಈ ಜಾಹೀರಾತಿನ ಶೂಟಿಂಗ್ ನಡೆದಿದೆ. ರಶ್ಮಿಕಾ ಮಂದಣ್ಣ ಮತ್ತು ಶಾರುಖ್ ಖಾನ್ ಅವರು ಜೊತೆಯಾಗಿ ಇದರಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ಈ ಜಾಹೀರಾತು ಬಿತ್ತರ ಆಗಲಿದೆ. ಶಾರುಖ್ ಜೊತೆ ರಶ್ಮಿಕಾ ನಟಿಸಿದ ಜಾಹೀರಾತು ಹೇಗಿದೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಲ್ಲೂ ಮೂಡಿದೆ.