ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
2019ರಲ್ಲಿ ಧ್ರುವ ಸರ್ಜಾ-ಪ್ರೇರಣಾ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಕಳೆದ ವರ್ಷ ಅಕ್ಟೋಬರ್ 2ರಂದು ಅವರಿಗೆ ಹೆಣ್ಣು ಮಗು ಜನಿಸಿತು. ಈಗ ಮತ್ತೆ ಪ್ರೇರಣಾ ಅವರು ತಾಯ್ತನದ ಸಂಭ್ರಮದಲ್ಲಿದ್ದಾರೆ.
ಈ ಕುರಿತು ಗ್ರಾಫಿಕ್ಸ್ ವೀಡಿಯೋ ಒಂದನ್ನು ಮಾಡಲಾಗಿದೆ. ಎಲ್ಲರಿಗೂ ಒಂದು ಸರ್ಪ್ರೈಸ್ ಇದೆ ಎಂದು ಮೊದಲು ಹೇಳಲಾಗಿದೆ. ವೀಡಿಯೋ ಕೊನೆಯಲ್ಲಿ ಧ್ರುವ ಮಗಳನ್ನು ಎತ್ತಿಕೊಂಡಿರುತ್ತಾರೆ. ವೀಡಿಯೋ ಕೊನೆಯಲ್ಲಿ ಪ್ರೇರಣಾ ಪ್ರೆಗ್ನೆಂಟ್ ಅನ್ನೋ ವಿಚಾರವನ್ನು ಧ್ರುವ ರಿವೀಲ್ ಮಾಡುತ್ತಾರೆ. ಸದ್ಯ ಧ್ರುವ ಸರ್ಜಾಗೆ ಎಲ್ಲರೂ ವಿಶ್ ತಿಳಿಸುತ್ತಿದ್ದಾರೆ.










