ಚಿಕ್ಕಮಗಳೂರು: ಕೇವಲ 1500 ರೂ ಸಾಲ ಮಾಡಿ ತೀರಿಸಲಾಗದೇ ಮನನೊಂದು 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ …

91
firstsuddi

ಚಿಕ್ಕಮಗಳೂರು: ಕೇವಲ 1500 ರೂ ಸಾಲ ಮಾಡಿ ಅದನ್ನು ತೀರಿಸಲಾಗದೇ 9ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಗಸ್ಟ್ 22ರಂದು ಜಿಲ್ಲೆಯ ಕೊಪ್ಪ ಪಟ್ಟಣದ ಬಿಜಿಎಸ್ ಖಾಸಗಿ ಶಾಲೆಯಲ್ಲಿ ನಡೆದಿದೆ.

ಅಜ್ಜಂಪುರ ತಾಲೂಕಿನ ಹಿರೇಬಳ್ಳೇಕೆರೆ ಗ್ರಾಮದ 9ನೇ ತರಗತಿಯ ಶ್ರೀನಿವಾಸ್ (14) ಮೃತ ವಿದ್ಯಾರ್ಥಿ. ಸ್ಮಾರ್ಟ್ ವಾಚ್ ಖರೀದಿಗೆ ಹಾಸ್ಟೆಲ್ ವಾರ್ಡನ್​ನಿಂದ ಎರಡು ಸಾವಿರ ರೂ. ಹಣ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದ. ಹಾಸ್ಟೆಲ್ ವಾರ್ಡನ್​ಗೆ ಹಣ ಹಿಂತಿರುಗಿಸಲು ಮೃತ ಶ್ರೀನಿವಾಸ್ ತನ್ನ ಸ್ನೇಹಿತರಿಂದ 1500 ರೂ. ಸಾಲ ಮಾಡಿದ್ದಾನೆ. ವಾಪಸ್ಸು ಸಾಲ ನೀಡಲಾಗದೆ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ಆತ್ಮಹತ್ಯೆಯ ರಹಸ್ಯ ಬಯಲಾಗಿದೆ.

ಮೃತ ಶ್ರೀನಿವಾಸ್ ನಿವೃತ್ತ ಯೋಧ ರಮೇಶಪ್ಪ ಅವರ ಪುತ್ರ. ಶ್ರೀನಿವಾಸ್​​ಗೆ ಸಾಲ ಕೊಟ್ಟ ಸ್ನೇಹಿತರೂ ಸಹ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿ ಬರೆದಿಟ್ಟ ಡೆತ್ ನೋಟ್ ಏಕಾಏಕಿ ವೈರಲ್ ಆಗಿದೆ.

ಡೆತ್ ನೋಟ್ ನಲ್ಲಿ ಸಾವಿಗೆ ಕಾರಣರಾದವರ ಬಗ್ಗೆ ವಿದ್ಯಾರ್ಥಿ ಬರೆದಿದ್ದಾನೆ. ಇದನ್ನು ಆಧರಿಸಿ ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತ ಬಾಲಕನ ತಂದೆ-ತಾಯಿ ಕಣ್ಣೀರು ಹಾಕುತ್ತಿದ್ದಾರೆ.