ಲಿವ್ ಇನ್ ಸಂಗಾತಿಯನ್ನು ಚಾಕುವಿನಿಂದ ಇರಿದು ಕೊಂದ ಮಹಿಳೆ!

47
firstsuddi

ಬೆಂಗಳೂರು: ಮಹಿಳೆಯೊಬ್ಬಳು ತನ್ನ ಲಿವ್ ಇನ್ ಸಂಗಾತಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಗರದ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹತ್ಯೆ ಮಾಡಿದ ಮಹಿಳೆಯನ್ನು ಬೆಳಗಾವಿ ಮೂಲದ 24 ವರ್ಷದ ರೇಣುಕಾ ಎಂದು ಗುರುತಿಸಲಾಗಿದ್ದು, ಮೃತನನ್ನು ಕೇರಳ ಮೂಲದ 29 ವರ್ಷದ ಜಾವೇದ್ ಎಂದು ಗುರುತಿಸಲಾಗಿದೆ.

ಮೊಬೈಲ್ ಸರ್ವಿಸ್ ಸೆಂಟರ್ ನಲ್ಲಿ ಕೆಲಸ ಮಾಡುತಿದ್ದ ಜಾವೇದ್, ಮಡಿವಾಳದ ಒಂದೇ ಏರಿಯಾದಲ್ಲಿ ವಾಸವಾಗಿದ್ದ ವೇಳೆ ರೇಣುಕಾಳ ಪರಿಚಯವಾಗಿದೆ. ಕಳೆದ ಮೂರು ವರ್ಷದಿಂದ ಇಬ್ಬರ ಪರಿಚಯವಾಗಿ ಬಳಿಕ ಅದು ಪ್ರೀತಿಗೆ ತಿರುಗಿತ್ತು. ಇದಾದ ಬಳಿಕ ಆಗಾಗ ಭೇಟಿ ಮಾಡುತಿದ್ದ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಆ ನಂತರ ಇಬ್ಬರು ಲಿವಿಂಗ್​ ಟುಗೆದರ್​ನಲ್ಲಿ ಇದ್ದರು. ಹೀಗೆ ಮೂರೂವರೆ ವರ್ಷಗಳಿಂದ ಜಾವೇದ್ ಹಾಗೂ ರೇಣುಕಾ ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದು, ಕೆಲ ದಿನಗಳಿಂದ ಅಷ್ಟೇ ಅಕ್ಷಯ್ ನಗರದ ಸರ್ವಿಸ್ ಅಪಾರ್ಟ್‍ಮೆಂಟ್‍ನಲ್ಲಿ ಈ ಇಬ್ಬರು ಉಳಿದುಕೊಳ್ಳುತ್ತಿದ್ದರು.

ಆದರೆ ಪ್ರತಿ ದಿನ ಜಾವೇದ್ ಹಾಗೂ ರೇಣುಕಾ ಮಧ್ಯೆ ಜಗಳವಾಗುತ್ತಿತ್ತು. ಶೀಲ ಶಂಕಿಸಿ ಜಾವೇದ್ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಅದರಂತೆಯೇ ಮಂಗಳವಾರ ಮಧ್ಯಾಹ್ನ 3ರ ಸುಮಾರಿಗೆ ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಆರೋಪಿ ಚಾಕುವಿನಿಂದ ಜಾವೇದ್‍ನ ಎದೆಗೆ ಇರಿದಿದ್ದಳು. ಬಳಿಕ ಅಲ್ಲಿನ ನಿವಾಸಿಗಳ ಜೊತೆ ಸೇರಿ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಳು. ಆದರೆ ಚಿಕಿತ್ಸೆ ಫಲಿಸದೆ ಜಾವೇದ್ ಮೃತಪಟ್ಟಿದ್ದಾನೆ.

ಇನ್ನೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೇಣುಕಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.