ಹಿಟ್ & ರನ್ ಕೇಸ್: ತಪ್ಪೋಪ್ಪಿಕೊಂಡ ಹಾಸ್ಯ ನಟ ಚಂದ್ರಪ್ರಭ.

61
firstsuddi

ಕನ್ನಡ ಕಿರುತೆರೆಯ ‘ಗಿಚ್ಚಿ ಗಿಲಿಗಿಲಿ’ ಶೋ ಮೂಲಕ ಜನಪ್ರಿಯತೆ ಪಡೆದ ಹಾಸ್ಯ ನಟ ಚಂದ್ರಪ್ರಭ ಅವರು ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಅವರು ಚಲಿಸುತ್ತಿದ್ದ ಕಾರು ಮಾಲ್ತೇಶ್ ಎಂಬ ಬೈಕ್ ಸವಾರನಿಗೆ ಡಿಕ್ಕಿ ಹೊಡಿದಿತ್ತು. ಈ ಘಟನೆಯಲ್ಲಿ ತಮ್ಮದು ಯಾವುದೇ ತಪ್ಪು ಇಲ್ಲ ಎಂದು ಚಂದ್ರಪ್ರಭ ಹೇಳಿಕೆ ನೀಡಿದ್ದರು. ಆದರೆ ಈಗ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಅಂದು ನಡೆದ ಅಪಘಾತದಲ್ಲಿ ತಮ್ಮದೇ ತಪ್ಪು ಎಂದು ಚಂದ್ರಪ್ರಭ ಒಪ್ಪಿಕೊಂಡಿದ್ದಾರೆ.

ಸೆ.4ರಂದು ಯುವಕ ಮಾಲ್ತೇಶ್‍ಗೆ ಅಪಘಾತ ಮಾಡಿ ಚಂದ್ರಪ್ರಭ ಎಸ್ಕೇಪ್ ಆಗಿದ್ದರು. ಪೊಲೀಸರ ಸೂಚನೆ ಮೇರೆಗೆ ಇಂದು ಚಿಕ್ಕಮಗಳೂರು ನಗರದ ಸಂಚಾರಿ ಠಾಣೆಗೆ ಅವರು ಹಾಜರಾಗಿದ್ದಾರೆ. ಈ ವೇಳೆ ಅವರು ತಪ್ಪು ಒಪ್ಪಿಕೊಂಡು ಕಣ್ಣೀರು ಹಾಕಿದ್ದೂ ಅಲ್ಲದೇ, ಅಪಘಾತಕ್ಕೆ ಒಳಗಾದ ಯುವಕನ ಯೋಗಕ್ಷೇಮ ವಿಚಾರಿಸುವುದಾಗಿ ಹೇಳಿದ್ದಾರೆ.

ನಾನು ಮಾಡಿದ ಕೆಲಸ ತಪ್ಪಾಯ್ತು ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಆತ ಕುಡಿದಿದ್ದ ಎಂದು ಹೇಳಿದ್ದೆ, ಮಾಲ್ತೇಶ್ ಕುಡಿದಿರಲಿಲ್ಲ. ಅಂದು ಅಪಘಾತದ ಬಳಿಕ ಯುವಕನ ಯೋಗಕ್ಷೇಮ ವಿಚಾರಿಸಬೇಕಿತ್ತು. ಈ ವಿಚಾರವಾಗಿ ಕ್ಷಮೆ ಕೇಳುತ್ತೇನೆ. ನಾನು ಬಡವ, ತಂದೆ ಸತ್ತು 11 ವರ್ಷವಾಗಿದೆ. ಆಸ್ಪತ್ರೆಗೆ ಹೋಗಿ ಯುವಕನ ಯೋಗಕ್ಷೇಮ ವಿಚಾರಿಸುತ್ತೇನೆ. ಮಾಲ್ತೇಶ್ ಆಸ್ಪತ್ರೆಯ ಖರ್ಚಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಚಂದ್ರಪ್ರಭ ಹೇಳಿಕೆ ನೀಡಿದ್ದಾರೆ.

ಸೆ.4ರಂದು ಚಂದ್ರಪ್ರಭ ಅವರು ಯುವಕ ಮಾಲ್ತೇಶ್‍ಗೆ ಅಪಘಾತ ಮಾಡಿ ಗಾಡಿ ನಿಲ್ಲಿಸದೇ ಪರಾರಿಯಾಗಿದ್ದರು. ಅಪಘಾತಕ್ಕೀಡಾದ ಮಾಲ್ತೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಮಾನವೀಯತೆಗೂ ಚಂದ್ರಪ್ರಭ, ಅಪಘಾತದ ಸ್ಥಳದಲ್ಲಿ ಯುವಕನಿಗೆ ಏನಾಯ್ತು ಎಂದು ನೋಡಲು ಸಹ ಬಂದಿರಲಿಲ್ಲ. ಚಿಕ್ಕಮಗಳೂರಿನ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಚಂದ್ರಪ್ರಭ ವಿರುದ್ಧ ದೂರು ದಾಖಲಾಗಿತ್ತು.