ಹಳೆ ದ್ವೇಷದ ಹಿನ್ನೆಲೆ- ತಲೆ ಕತ್ತರಿಸಿ 23 ಪಾರಿವಾಳಗಳ ಕೊಂದ ದುಷ್ಕರ್ಮಿಗಳು…

57
firstsuddi

ಹುಬ್ಬಳ್ಳಿ: ಹಳೆ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳು, ವ್ಯಕ್ತಿಯೊಬ್ಬರು ಸಾಕಿದ್ದ 23 ಪಾರಿವಾಳಗಳ ತಲೆ ಕತ್ತರಿಸಿ ಕೊಂದಿರುವ ಅಮಾನವೀಯ ಘಟನೆ ನಗರದ ಗೋಕುಲ ರಸ್ತೆಯಲ್ಲಿರೋ ಯಾವಗಲ್ ಫ್ಲಾಟ್​ನಲ್ಲಿ ನಡೆದಿದೆ.

ರಾಹುಲ್ ದಾಂಡೇಲಿ ಎಂಬುವವರಿಗೆ ಸೇರಿದ 23 ಪಾರಿವಾಳಗಳನ್ನು ಚಾಕುವಿನಿಂದ ತಲೆ ಕತ್ತರಿಸಿ ಸಾಯಿಸಲಾಗಿದೆ. ರಾಹುಲ್ ಅವರು ಕಳೆದ ಆರು ತಿಂಗಳಿಂದ ಪಾರಿವಾಳ ಸಾಕುತ್ತಿದ್ದರು. ಆದರೆ ಹಳೇ ದ್ವೇಷದ ಹಿನ್ನಲೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಪಾರಿವಾಳಗಳ ಗೂಡನ್ನು ಧ್ವಂಸ ಮಾಡಿ ಅವುಗಳನ್ನು ಸಾಯಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಪಾರಿವಾಳಗಳನ್ನು ಕೊಂದಿರುವ ದುಷ್ಕರ್ಮಿಗಳನ್ನು ಕೂಡಲೇ ಅರೆಸ್ಟ್ ಮಾಡಬೇಕೆಂದು ಆಗ್ರಹಿಸಿ ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ರಾಹುಲ್ ಅವರು ದೂರು ದಾಖಲಿಸಿದ್ದಾರೆ.