ವರದಕ್ಷಿಣೆ ಕಿರುಕುಳ: ಪತಿಯೇ ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂಬುವಂತೆ ಬಿಂಬಿಸಲು ಯತ್ನ…

75
firstsuddi

ಬೆಂಗಳೂರು: ಪತಿಯೇ ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂಬುವಂತೆ ಬಿಂಬಿಸಲು ಯತ್ನಿಸಿರುವಂತಹ ಘಟನೆ ನಗರದ ಯಲಹಂಕ ಉಪನಗರ 3 ನೇ ಹಂತದಲ್ಲಿ ನಡೆದಿದೆ.

ರೇಖಾ ಕೊಲೆಯಾದ ಮೃತ ದುರ್ದೈವಿ. ವರದಕ್ಷಿಣೆ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದು, ಪತಿ ಸಂತೋಷ್ ಪತ್ನಿ ರೇಖಾಳನ್ನು ಮದುವೆ ಆದಾಗಿನಿಂದಲೂ ಹಣಕ್ಕಾಗಿ ಪೀಡಿಸುತ್ತಾ ಇದ್ದ. ಹಣ, ಒಡವೆ ಕೊಟ್ಟು ಅದ್ದೂರಿಯಾಗಿ ಕುಟುಂಬಸ್ಥರು ಮದುವೆ ಮಾಡಿದ್ದರು. ಆದರೂ ಸೈಟ್ ತಗೋಬೇಕು ತವರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದ. ಇದಕ್ಕೆ ರೇಖಾ ಒಪ್ಪದಿದ್ದಾಗ ಹಲವು ಬಾರಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದ. ಆದರೆ ಇದೀಗ ಸಂತೋಷ್ ಪತ್ನಿ ರೇಖಾಳನ್ನು ಕೊಲೆ ಮಾಡಿ ಬಳಿಕ ಸೀರೆಯಿಂದ ಫ್ಯಾನಿಗೆ ನೇಣು ಹಾಕಿ, ಆತ್ಮಹತ್ಯೆ ಎಂಬುವಂತೆ ಬಿಂಬಿಸಲು ಯತ್ನಿಸಿದ್ದಾನೆ.

ಸದ್ಯ ಪತಿ ಸಂತೋಷ್ ನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.