ಗರಡಿ ಮನೆಯಲ್ಲಿ ನೇಣು ಬಿಗಿದುಕೊಂಡು ಅಪ್ರಾಪ್ತ ಕುಸ್ತಿಪಟು ಆತ್ಮಹತ್ಯೆ…

46
firstsuddi

ದಾವಣಗೆರೆ: ಅಪ್ರಾಪ್ತ ವಯಸ್ಸಿನ ಕುಸ್ತಿಪಟುವೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರ ಪಟ್ಟಣದ ಶಿಬಾರ ಸರ್ಕಲ್ ಬಳಿ ಇರುವ ಗರಡಿ ಮನೆಯಲ್ಲಿ ನಡೆದಿದೆ.

ಕಾವ್ಯಾ ಪೂಜಾರ್(13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಕುಸ್ತಿಯಲ್ಲಿ ರಾಷ್ಟೀಯ, ಅಂತರಾಷ್ಟೀಯ ಮಟ್ಟದಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದ ಕಾವ್ಯಾ, ಧಾರವಾಡ ಕುಸ್ತಿ ಹಾಸ್ಟೆಲ್​ನಲ್ಲಿ ಸೇರಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು.

ಎರಡು ದಿನಗಳ ಹಿಂದೆ ಹರಿಹರ ಪಟ್ಟಣಕ್ಕೆ ಬಂದಿದ್ದ ಕಾವ್ಯಾ, ಇಂದು ಬೆಳಗ್ಗೆ ಗರಡಿ ಮನೆಯಲ್ಲಿ ತರಬೇತಿಗೆ ಹೋಗಿದ್ದಾಗ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆಯ ನಂತರವೇ ಕಾರಣ ತಿಳಿಯಬೇಕಿದೆ.

ಘಟನಾ ಸ್ಥಳಕ್ಕೆ ಹರಿಹರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.