ರಾಷ್ಟ್ರೀಯ ಆಹ್ವಾನಿತ ಥ್ರೋ ಬಾಲ್ ಪಂದ್ಯಾವಳಿ- ಬಕ್ಕಿ ಗ್ರಾಮದ ಹೃತ್ವರಿ ತೋಷಗೆ ಗೆಲುವು…

74
firstsuddi

ಕೊಟ್ಟಿಗೆಹಾರ: ಇಂಡಿಯನ್ ಕ್ಯಾಂಪಸ್ ಆಫ್ ಶೋಷಿಯಲ್ ಅಂಡ್ ಎಜುಕೇಷನ್, ವತಿಯಿಂದ ನೇಪಾಳದ ಪೋಕ್ರ ಆರ್ಮಿ ಕ್ಯಾಂಪಸ್ ನಲ್ಲಿ ನಡೆದ ಅಂತರ್ ರಾಷ್ಟ್ರೀಯ ಆಹ್ವಾನಿತ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಬಕ್ಕಿ ಗ್ರಾಮದ ಹೃತ್ವರಿ ತೋಷ ಜಯಗಳಿಸಿದ್ದಾರೆ.

ಸಂಪತ್ ಬಕ್ಕಿ ಮತ್ತು ಶ್ರಾವಣಿ ಅವರ ಪುತ್ರಿ ಹೃತ್ವರಿ ತೋಷ, ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ್ದು ಮಂಡ್ಯದಲ್ಲಿ ನವೆಂಬರ್ 3 ಮತ್ತು 4 ರಂದು ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಹೃತ್ವರಿ ತೋಷ ನೇತೃತ್ವದ ಚಿಕ್ಕಮಗಳೂರು ಜಿಲ್ಲಾ ತಂಡ ಭಾಗವಹಿಸಲಿದೆ. ಹೃತ್ವರಿ ತೋಷ ಅವರು ಇಂಡಿಯನ್ ಥ್ರೋ ಬಾಲ್ ಕೋಚ್ ಗುರುಮೂರ್ತಿ ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಹೃತ್ವರಿ ತೋಷ ಬಕ್ಕಿ ಗ್ರಾಮದ ಸಂಪತ್ ಬಕ್ಕಿ ಮತ್ತು ಶ್ರಾವಣಿ ದಂಪತಿಗಳ ಪುತ್ರಿಯಾಗಿದ್ದು, ಕಾಲೇಜು ಅದ್ಯಾಪಕ ವರ್ಗ ಹಾಗೂ ಕೋಚ್ ಗುರುಮೂರ್ತಿ ಅವರು ಶುಭ ಹಾರೈಸಿದ್ದಾರೆ.